photo courtesy : Udayavani

ಸುರತ್ಕಲ್: ಬೈಕಂಪಾಡಿ -ಜೋಕಟ್ಟೆ ಬಳಿ ಖಾಸಗಿ ಬಸ್ಸೊಂದು ಮಂಗಳವಾರ ಬೆಳಗ್ಗೆ ಪಲ್ಟಿಯಾಗಿದ್ದು ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಳಗ್ಗಿನ ವೇಳೆಯಾದ ಕಾರಣ ಪ್ರಯಾಣಿಕರಿಂದ ಬಸ್ ತುಂಬಿಕೊಂಡಿತ್ತು.ಬಸ್ಸಿನಲ್ಲಿ ಶಾಲಾ ,ಕಾಲೇಜು ವಿದ್ಯಾರ್ಥಿಗಳು, ಕಚೇರಿಗಳಿಗೆ ತೆರಳುತ್ತಿದ್ದವರು ಇದ್ದರು.

ಅವಘಡ ನಡೆದ ಸ್ಥಳದಲ್ಲಿ ರಸ್ತೆ ಸಂಪೂರ್ಣ ಹಾಳಾಗಿದೆ ಎಂದು ವರದಿಯಾಗಿದೆ.ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಷಾತ್ ಎಲ್ಲಾ ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

Leave a Reply