ನವದೆಹಲಿ : ರಾಜ್ಯದಲ್ಲಿನ ಅತಿವೃಷ್ಟಿಯಿಂದ ಆಗಿರುವ ನಾಶ ನಷ್ಟವನ್ನು ತುಂಬಲು ರಾಜ್ಯ ಸರಕಾರ ಕೇಂದ್ರಕ್ಕೆ ಎರಡು ಸಾವಿರ ಕೋಟಿ ರೂಪಾಯಿ ಅನುದಾನಕ್ಕೆ ಮೊರೆ ಇಟ್ಟಿದೆ. ಕೊಡಗು ಮತ್ತು ಮಲೆನಾಡು ಭಾಗದ 13 ಜಿಲ್ಲೆಗಳಲ್ಲಿ ಉಂಟಾಗಿರುವ ಬರದ ಛಾಯೆಯಿಂದ 3705.87 ಕೋಟಿ ರೂ. ನಷ್ಟವಾಗಿದ್ದು ಜನರನ್ನು ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ರಾಜ್ಯವು ಪ್ರಧಾನಿ ಮೋದಿಯವರಲ್ಲಿ ಮನವಿ ಮಾಡಿದೆ.

ಮುಖ್ಯಮಂತ್ರಿ ಎಚ್. ಡಿ. ಕುಮಾರ ಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದ ನಿಯೋಗ ನವದೆಹಲಿಯಲ್ಲಿ ಪ್ರಧಾನಿಯನ್ನು ಭೇಟಿ ನಾಶ ನಷ್ಟಗಳ ಕುರಿತು ವಿವರಣೆ ನೀಡಿದ್ದು, ಎರಡು ತಂಡಗಳನ್ನು ಈ ಬಗ್ಗೆ ಕಳುಹಿಸುವುದಾಗಿ ಮೋದಿ ಹೇಳಿದರು. ನಿಯೋಗದಲ್ಲಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್, ಸಚಿವರಾದ ಆರ್.ವಿ. ದೇಶ್ ಪಾಂಡೆ,ಡಿಕೆ ಶಿವಕುಮಾರ್, ಎಚ್.ಡಿ. ರೇವಣ್ಣ, ಕೃಷ್ಣ ಭೈರೇಗೌಡ ಮತ್ತಿತರು ಉಪಸ್ಥಿತರಿದ್ದರು.

ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಅನಿಲ್ ಮಲ್ಲಿಕ್ ನೇತೃತ್ವದ ಆರು ಅಧಿಕಾರಿಗಳ ತಂಡ ಬೆಂಗಳೂರಿಗೆ ಆಗಮಿಸಲಿದ್ದು, ಈ ತಂಡದ ಮೂವರು ಕೊಡಗಿಗೆ ಭೇಟಿ ಕೊಟ್ಟರೆ, ಇನ್ನಿತರ ಮೂವರು ದಕ್ಷಿಣ ಕನ್ನಡ ಹಾಸನ ಉಡುಪಿ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ.

Leave a Reply