ಹೊಸದಿಲ್ಲಿ: ದಿಲ್ಲಿ ಸರಕಾದ ಸೀಲು ಹಾಕಿದ ಕಟ್ಟಡದ ಬೀಗವನ್ನು ಬಲವಂತವಾಗಿ ತೆರೆದ ಬಿಜೆಪಿ ದಿಲ್ಲಿ ಅಧ್ಯಕ್ಷ ಮನೋಜ್ ತಿವಾರಿಯನ್ನು ಸುಪ್ರೀಂಕೋರ್ಟು ವ್ಯಂಗ್ಯವಾಡಿದೆ. ದಿಲ್ಲಿ ಗೋಕುಲ್‍ಪುರಿಯ ಎಲ್ಲ ಮನೆಗಳು ಕಾನೂನು ಬಾಹಿರವಾಗಿ ನಿರ್ಮಿಸಲಾಗಿದೆ. ಆದರೆ ಬಿಜೆಪಿ ಬೆಂಬಲಿಗನ ಮನೆಗೆ ಮಾತ್ರ ಸೀಲು ಹೊಡೆಯಲಾಗಿದೆ. ಕಾರ್ಪೊರೇಷನ್‍ನ ಕ್ರಮದ ವಿರುದ್ಧ ತನ್ನ ಪ್ರತಿಕ್ರಿಯೆ ಇದೆಂದು ತಿವಾರಿ ಹೇಳಿದ್ದರು. ಈ ಹೇಳಿಕೆಯ ವಿರುದ್ಧ ಸುಪ್ರೀಂಕೋರ್ಟು ಅಪಹಾಸ್ಯ ಮಾಡಿದೆ.

“ಟೆಲಿವಿಷನ್ ಸಂದರ್ಶನದಲ್ಲಿ ದಿಲ್ಲಿಯಲ್ಲಿ ಬೀಗ ಹಾಕದ 1000 ಅನಧಿಕೃತ ಕಟ್ಟಡಗಳಿವೆ ಎಂದು ತಾವು ಆರೋಪಿಸಿದ್ದೀರಿ.ಮುಂದಿನ ದಿವಸ ಆ ಸಾವಿರ ಕಟ್ಟಡಗಳ ಪಟ್ಟಿಯನ್ನು ಕೋರ್ಟಿಗೆ ಸಲ್ಲಿಸಬೇಕು. ಲೀಸ್ಟ್ ಕೊಟ್ಟರೆ ಅದನ್ನು ಮುಚ್ಚಿಸುವ ಅಧಿಕಾರವನ್ನು ನಿಮಗೆ ಕೊಡಲಾಗುವುದು” ಎಂದು ಸುಪ್ರೀಂಕೋರ್ಟಿನ ಮೂವರು ಸದಸ್ಯರ ಪೀಠ ಮನೋಜ್ ತಿವಾರಿಗೆ ಹೇಳಿತು.

ಗೋಕುಲ್ ಪುರಿಯ ಸರಕಾರ ಮುದ್ರೆ ಹಾಕಿದ ಅನಧಿಕೃತ ಕಟ್ಟಡದ ಬೀಗವನ್ನು ಒಡೆದ ಘಟನೆಯ ಕುರಿತು ಪ್ರತಿಕ್ರಿಯಿಸಿದಾಗ ಈ ಪ್ರದೇಶದಲ್ಲಿ ಸಾವಿರ ಅನಧಿಕೃತ ಕಟ್ಟಡಗಳಿವೆ ಎಂದು ತಿವಾರಿ ಹೇಳಿದ್ದರು. ಮುನ್ಸಿಪಲ್ ಕಾರ್ಪೊರೇಷನ್ ಸೀಲು ಹಾಕಿದ್ದ ಅನಧಿಕೃತ ಕಟ್ಟಡದ ಬೀಗ ಒಡೆದದ್ದಕ್ಕಾಗಿ ಮನೋಜ್ ತಿವಾರಿ ವಿರುದ್ಧ ಪ್ರಕರಣ ದಾಖಲಾಗಿದೆ.

Leave a Reply