ಮಾಜಿ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರು, ಕಾಂಗ್ರೆಸ್ ಮತ್ತು ಬಲಪಂಥೀಯ ಆರ್ ಎಸ್ ಎಸ್ / ಜನ ಸಂಘ ಎರಡರಿಂದಲೂ ಸಮಾನ ಪ್ರಶಂಸೆಯನ್ನು ಪಡೆದ ಕೆಲ ಕಾಂಗ್ರೆಸ್ ನಾಯಕರಲ್ಲಿ ಒಬ್ಬರು.

1965 ರಲ್ಲಿ, ಜನಸಂಘದ ಸಂಸ್ಥಾಪಕ ಪಿ.ಟಿ. ದೀನ್ ದಯಾಳ್ ಉಪಾಧ್ಯಾಯ ಅವರು, ಶಾಸ್ತ್ರಿಯವರ ನಾಯಕತ್ವವನ್ನು ‘ಜನ್ ನಾಯಕ್’ ಎಂದು ಪ್ರಶಂಸಿಸಿದ್ದರು.

ಇದೀಗ ಶಾಸ್ತ್ರಿಯವರ ಪುತ್ರ ಸುನೀಲ್ ಶಾಸ್ತ್ರಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ತನ್ನ ತಂದೆಗೆ ಹೋಲಿಸಿ ಪ್ರಶಂಸಿಸಿದ್ದಾರೆ. ಆದರೆ ಈ ಮಾತು ಕಾಂಗ್ರೆಸ್ ನಾಯಕರಲ್ಲಿ ಮುಜುಗರ ಮತ್ತು ಆಶ್ಚರ್ಯವುಂಟು ಮಾಡಿದೆ.

ಇಂಡಿಯಾ ಟುಡೇ ಜೊತೆಗೆ ಮಾತನಾಡುತ್ತಾ, “ತನ್ನ ಸ್ವಂತದ ಬಗ್ಗೆ ಚಿಂತಿಸದೆ ಕೇವಲ ದೇಶಕ್ಕಾಗಿ ದುಡಿದ ಒಬ್ಬ ಶ್ರೇಷ್ಠ ವ್ಯಕ್ತಿಯ ಪುತ್ರನಾಗಿ ಗೌರವಿಸಲ್ಪಡುತ್ತಿರುವುದು ನನಗೆ ಹೆಮ್ಮೆಯ ವಿಷಯವಾಗಿದೆ” ಎಂದು ಹೇಳಿದ್ದಾರೆ.

ತಾಶ್ಕೆಂಟ್ನಲ್ಲಿ ತಂದೆಯವರು ಅಕಾಲಿಕವಾಗಿ ನಿಧನರಾದಾಗ, ನಾನು ಮತ್ತು ಮೂವರು ಸಹೋದರರು ಒಂದು ಕೊಠಡಿಯಲ್ಲಿ ಮಲಗಿದ್ದೆವು. ನಮ್ಮ ತಂದೆ ಭಾರತ ಹೆಮ್ಮೆ ಪಡುವ ವ್ಯಕ್ತಿಯಾಗಿದ್ದರೂ ಬಹಳ ಸರಳ ವ್ಯಕ್ತಿಯಾಗಿದ್ದರು ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿಯವರೂ ತಮ್ಮ ತಂದೆಯಂತೆಯೇ ಕೆಲಸ ಮಾಡುತ್ತಿದ್ದಾರೆ. ವಿಶ್ವದಾದ್ಯಂತ ಭಾರತದ ಗೌರವವನ್ನು ಹೆಚ್ಚಿಸುತ್ತಿದ್ದಾರೆ. ‘ಸಬ್ಕಾ ಸತ್ ಸಬ್ಕಾ ವಿಕಾಸ್’ ನಂತಹ ಸಮಗ್ರ ಬೆಳವಣಿಗೆಯ ಯೋಜನೆಗಳನ್ನು ರೂಪಿಸುತ್ತಿದ್ದಾರೆ ಎಂದು ಸುನೀಲ್ ಶಾಸ್ತ್ರಿ ಹೇಳಿದ್ದಾರೆ.

ಇಂದಿನ ಭಾರತೀಯ ರಾಜಕೀಯದಲ್ಲಿ ಪ್ರಧಾನಿ ಮೋದಿಯವರಿಗೆ ಪರ್ಯಾಯವಾಗಿ ಯಾರೂ ಇಲ್ಲ. 2019 ರಲ್ಲಿ ಬಿಜೆಪಿ ದಾಖಲೆ ಸ್ಥಾನಗಳೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿದ ದಲಿತ ನಾಯಕ ಮತ್ತ ಸಾಮಾಜಿಕ ಕಾರ್ಯಕರ್ತ ರಾಜ್ ಕುಮಾರ್ ನಾಗ್ರಾಥ್, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರು, ಸಾಮಾಜಿಕ ಮತ್ತು ಆರ್ಥಿಕವಾಗಿ ಕೆಳಮಟ್ಟದಲ್ಲಿ ವಾಸಿಸುವ ಜನರ ಕಲ್ಯಾಣ ಬಗ್ಗೆ ಯಾವಾಗಲೂ ಚಿಂತಿಸುತ್ತಿದ್ದರು. ಆದರೆ ಮೋದಿಯವರು ಅಂಬಾನಿ ಮತ್ತು ಅದಾನಿ ಮುಂತಾದ ಕಾರ್ಪೋರೆಟ್ ಗಳ ಹಿತಾಸಕ್ತಿ ಗಳ ಮೇಲೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ ಅವರು, ಶಾಸ್ತ್ರಿ ಮಗ ಮೋದಿಯವರನ್ನು ತಂದೆಗೆ ಹೋಲಿಸಿದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಮೂಲ ವರದಿ : ಇಂಡಿಯಾ ಟುಡೇ

Leave a Reply