ತಮ್ಮ ಮಕ್ಕಳು ಬೇಬಿ ಸಿಟ್ಟಿಂಗ್ ಅಥವಾ ನರ್ಸರಿಯಲ್ಲಿ ಇದ್ದಾರೆ ಎಂದು ದುಡಿಯುವ ತಾಯಂದಿರು ನಿರಾಳರಾಗಿರುತ್ತಾರೆ. ಆದರೆ ಕೆಲವೊಮ್ಮೆ ಮಕ್ಕಳ ಜೊತೆ ಕ್ರೂರವಾಗಿ ವರ್ತಿಸುವ ನರ್ಸರಿ ಸಿಬ್ಬಂದಿಗಳ ಸ್ಟೋರಿಗಳನ್ನು ನಾವು ಆಗಾಗ ಕೇಳುತ್ತಿರುತ್ತೇವೆ.

ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ.
ತನ್ನ 17 ತಿಂಗಳ ಮಗಳ ಪಿಂಕ್ ಶೂವನ್ನು ಸಿಬ್ಬಂದಿಗಳು ಟೇಪ್ ನಲ್ಲಿ ಸುತ್ತಿದ ಚಿತ್ರವನ್ನು ತಾಯಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ‌ ಶೇರ್ ಮಾಡಿದ್ದಾರೆ. ಯುಎಸ್ನ ನಾರ್ತ್ ಕೆರೋಲಿನಾದಲ್ಲಿನ ಪ್ಲೆಸೆಂಟ್ ಡೇ ಕೇರ್ ಸೆಂಟರ್ ನಲ್ಲಿ ಈ ಘಟನೆ ನಡೆದಿದ್ದು, ಇದರಿಂದಾಗಿ ಮಗುವಿನ ಕಾಲುಗಳು ಕೆಂಪಾಗಿವೆ.

“ಕೇವಲ ಚಪ್ಪಲಿಯನ್ನು ಟೇಪ್ ಮೂಲಕ ಸುತ್ತಿದ್ದಲ್ಲ, ಬದಲಾಗಿ ಅದರ ಜೊತೆಗೆ ಮಗುವಿನ ಕಾಲನ್ನೂ ಬಿಗಿಯಾಗಿ ಸುತ್ತಲಾಗಿತ್ತು. ಇದರಿಂದಾಗಿ ಕಾಲುಗಳು ಬಾತುಕೊಂಡಿವೆ. ನನ್ನ ಮಗುವಿಗೆ ಸರಿಯಾಗಿ ಮಾತನಾಡಲೂ ಬರುವುದಿಲ್ಲ. ನನ್ನ ಮಗು ಶೂ ಕಳಚಲು ಕಲಿತಿತ್ತು. ಆದ್ದರಿಂದ ಅವರು ಈ ರೀತಿ ವರ್ತಿಸಿದ್ದಾರೆ” ಎಂದು ಚಿತ್ರಗಳನ್ನು ಹಂಚಿಕೊಂಡಿದ್ದ ಅಮೆರಿಕದ ತಾಯಿ ಜೆಸ್ಸಿಕಾ ಹೇಯ್ಸ್ಗೆ ಬರೆದಿದ್ದಾರೆ.

ವರದಿಗಳ ಪ್ರಕಾರ, ಈ ಪೋಸ್ಟ್ ವೈರಲ್ ಆದ ನಂತರ, ಇಬ್ಬರು ಸಿಬ್ಬಂದಿಗಳನ್ನು ವಜಾ ಮಾಡಲಾಗಿದ್ದು, ಪೋಷಕರೊಂದಿಗೆ ಕ್ಷಮೆಯಾಚಿಸಲಾಗಿದೆ.

Leave a Reply