ಹುಬ್ಬಳ್ಳಿ: ಮುಸ್ಲಿಮ್ ಧಾರ್ಮಿಕ ಗುರುಗಳ ಗುಂಪೊಂದು ಇತ್ತೀಚೆಗೆ ನಗರದ ಖಾಸಗಿ ಹೋಟೆಲ್ ನಲ್ಲಿ ಬಿಜೆಪಿ ನಾಯಕರನ್ನು ಸನ್ಮಾನಿಸಿದೆ.

ಅಂಜುಮಾನ್ ಇ ಇಸ್ಲಾಂ ಸಮಿತಿಯ ಸದಸ್ಯರಾದ ಮೌಲಾನಾ ನಿಸಾರ್ ಚಾಗನ್ ಮತ್ತು ಅಹ್ಮದ್ ರಾಝಾ ಖಾಜಿ ಸೇರಿದಂತೆ ಮೌಲಾನಾಗಳ ಗುಂಪು ಮೇಯರ್ ಸುಧೀರ್ ಸಾರಾ ಮತ್ತು ಉಪ ಮೇಯರ್ ಮೆನಾಕ ಹುರಾಲಿಯನ್ನು ಸನ್ಮಾನಿಸಿದೆ.

ಈ ಸಂಧರ್ಭದಲ್ಲಿ ಮೌಲಾನಾಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ
ಜಗದೀಶ್ ಶೆಟ್ಟರ್ ಸಹೋದರ ಹಾಗೂ ಎಂಎಲ್ಸಿ ಪ್ರದೀಪ್ ಶೆಟ್ಟರ್, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅವರ ಸಹೋದರನಿಗೆ ಮತ ಹಾಕುವಂತೆ ಕೇಳಿಕೊಂಡರು.

ಆದಾಗ್ಯೂ, ಮುಸ್ಲಿಂ ಸಮುದಾಯದ ಹೆಚ್ಚಿನ ಸದಸ್ಯರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮೌಲಾನಾಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಈ ಫೋಟೊಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹರಡಿರುವ ಒಂದು ಟಿಪ್ಪಣಿ,

‘ಮುಸ್ಲಿಂ ಉಲೇಮಾಗಳು ಮಾರಾಟಕ್ಕಿದ್ದಾರೆ, ಚುನಾವಣೆ ಮುಗಿಯುವ ತನಕ ಹರಾಜು ಪ್ರಕ್ರಿಯೆ ತೆರೆದುಕೊಂಡಿದೆ’ ಎಂಬ ಬರಹದಡಿಯಲ್ಲಿ ಫೋಟೋ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡಲಾಗಿದೆ.

ಮೂಲ ವರದಿ: Hubballitimes.com

Leave a Reply