ಬಿಹಾರದ ಮಾಜಿ ಮುಖ್ಯಮಂತ್ರಿ, ಹಿಂದೂಸ್ತಾನಿ ಅವಾಮ್ ಮೋರ್ಚಾ (ಎಚ್‌ಎಎಂ) ಮುಖ್ಯಸ್ಥ ಜೀತನ್ ರಾಮ್ ಮಾಂಝಿ ಎನ್‌ಡಿಎ ಮಿತ್ರಕೂಟದಿಂದ ಹೊರನಡೆದಿದ್ದಾರೆ. ಎನ್ಡಿಎ ಜೊತೆ ರಾಜ್ಯಸಭೆಯ ಒಂದು ಸ್ಥಾನ ತನ್ನ ಪಕ್ಷಕ್ಕೆ ನೀಡಬೇಕೆಂಬುದು ಮಾಂಝಿಯವರ ಬೇಡಿಕೆ ಆಗಿತ್ತು. ಆದರೆ ಎನ್ಡಿಎ ಅವರ ಬೇಡಿಕೆಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ
ಮುಂದಿನ ಲೋಕಸಭೆ ಮತ್ತು ವಿಧಾನಸಭೆಯ ಎರಡು ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸದಿರುವ ತೀರ್ಮಾನಕ್ಕೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.

ಮಾತ್ರವಲ್ಲ ಮಹಾಮೈತ್ರಿ ಸೇರಲಿರುವ ಅವರು ಈ ಕುರಿತು ಲಾಲು ಪತ್ನಿ ರಾಬ್ಡಿ ದೇವಿಯವರ ಜೊತೆ ಮಾತುಕತೆ ನಡೆಸಿದ್ದಾರೆ ಎಂದಿದ್ದಾರೆ.

ಈ ಹಿಂದೆ ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ಜೊತೆಗೆ ಭಿನ್ನಾಭಿಪ್ರಾಯ ಹೊಂದಿದ ಮಾಂಝಿ ನಂತರ ತಮ್ಮ ಸ್ವಂತ ಪಕ್ಷ ಸ್ಥಾಪಿಸಿದ್ದರು. 2015ರ ವಿಧಾನಸಭೆ ಚುನಾವಣೆಯಲ್ಲಿ ಎನ್ಡಿಎ ಸೇರಿದ್ದರು. ಇದೀಗ ಎನ್ಡಿಎ ಮೈತ್ರಿಯಿಂದ ಹೊರ ನಡದಿದ್ದು ಹೊಸ ರಾಜಕೀಯ ಸಂಚಲನ ಮೂಡಿಸಿದೆ.

Leave a Reply