ಇಡೀ ದೇಶದಲ್ಲೇ ಸಂಚಲನ ಮೂಡಿಸಿದ ,ಪಂಜಾಬ್‌ ನ್ಯಾಷನಲ್ ಬ್ಯಾಂಕ್‌ಗೆ (ಪಿಎನ್‌ಬಿ) ₹11,344 ಕೋಟಿ ಪಂಗನಾಮ ಹಾಕಿದ ಆರೋಪಿ ವಜ್ರ ವ್ಯಾಪಾರಿ ನೀರವ್ ಮೋದಿಯವರ ವಿರುದ್ಧ ಟ್ವಿಟರಿಗರು ಹರಿಹಾಯ್ದಿದ್ದಾರೆ.

ನಮ್ಮನ್ನು ಸುಮಾರು ಇನ್ನೂರು ವರ್ಷ ಆಳಿದ ವಸಾಹತು ಶಾಹಿ ಬ್ರಿಟಿಷರಿಗೆ ನಿರವ್ ಮೋದಿ ಮತ್ತು ಇಂಗ್ಲೆಂಡನ್ನು ಹೋಲಿಸಿದ್ದಾರೆ. ಇಂಗ್ಲೆಂಡ್ನಲ್ಲಿ ಆಶ್ರಯ ಪಡೆದಿರುವ ನಿರವ್ ಮೋದಿಯ ವಿರುದ್ಧ #NiravModi ಹ್ಯಾಷ್ ಟ್ಯಾಗ್ ಬಳಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟ್ವಿಟರಿಗರ ಕೆಲವು ಟ್ವಿಟರ್ ಈ ಕೆಳಗಿನಂತಿದೆ.

ಮೊದಲು ಅವರು ಭಾರತಕ್ಕೆ ಬಂದು ನಮ್ಮನ್ನು ಲೂಟಿ ಮಾಡಿದರು. ಅವರನ್ನು ಹಿಮ್ಮೆಟ್ಟಿಸಲು 200 ವರ್ಷಗಳು ತೆಗೆದುಕೊಂಡಿತು. ಈಗ ಭಾರತೀಯರೇ ನಮ್ಮನ್ನು ಲೂಟಿ ಮಾಡುತ್ತಿದ್ದಾರೆ. ಅವರಿಗೆ ಯುಕೆ ರಾಜಕೀಯ ಆಶ್ರಯದ ಹೆಸರಿನಲ್ಲಿ ನಮ್ಮನ್ನು ತಳ್ಳುತ್ತಿದೆ. ವಸಾಹತುಶಾಹಿ ಕಡತಗಳಲ್ಲಿ ಮಾತ್ರ ಕೊನೆಗೊಂಡಿದ್ದು, ವಾಸ್ತವದಲ್ಲಿ ಯುಕೆ ಇನ್ನೂ ನಮ್ಮನ್ನು ಆಳುತ್ತಿದೆ ಎಂದು ರಘುರಾಮನ್ ಟ್ವೀಟ್ ಮಾಡಿದ್ದಾರೆ.

ಸ್ವಾತಂತ್ರ್ಯ ಮುಂಚೆ ಮತ್ತು ನಂತರ ಏನು ಬದಲಾಗಿದೆ?

ಸ್ವಾತಂತ್ರ್ಯದ ಮುಂಚೆ, ನಮ್ಮನ್ನು ಲೂಟಿ ಮಾಡುವವರು ಬ್ರಿಟನ್ನಿಂದ ಇಲ್ಲಿಗೆ ಬಂದರು.

ಸ್ವಾತಂತ್ರ್ಯಾನಂತರ: ನಮ್ಮನ್ನು ಲೂಟಿ ಮಾಡಿದವರು ಬ್ರಿಟನ್‌ಗೆ ಹೋಗುತ್ತಿದ್ದಾರೆ. # ನಿರವ್ ಮೋದಿ ಎಂದು ಹ್ಯಾಷ್ ಟ್ಯಾಗ್ ಹಾಕಿ ವ್ಯಂಗ್ಯವಾಡಿದ್ದಾರೆ. ಹೀಗೆ ಹಲವಾರು ಟ್ವಿಟರಿಗರು ವಿಭಿನ್ನ ರೀತಿಯಲ್ಲಿ ತಮ್ಮ ಭಾವನೆ, ಆಕ್ರೋಶಗಳನ್ನು ಹೊರ ಹಾಕಿದ್ದಾರೆ.

Leave a Reply