ತಮಿಳುನಾಡು ರಾಜ್ಯ ಮಟ್ಟದ ರನ್ನರ್, ನಾಲ್ಕು ಚಿನ್ನದ ಪದಕಗಳನ್ನು ಗಳಿಸಿದ ಓಟಗಾರ್ತಿ ಇದೀಗ ತನ್ನ ಕುಟುಂಬ ಮತ್ತು ಮೂವರು ಮಕ್ಕಳನ್ನು ಸಾಕಲು ಚಹಾವನ್ನು ಮಾರಾಟ ಮಾಡುತ್ತಿದ್ದಾರೆ.

41 ಕಿ.ಮೀ. ಮ್ಯಾರಥಾನ್ ಗಳಲ್ಲಿ ಪಾಲ್ಗೊಂಡಿದ್ದ 45 ವರ್ಷದ ಕಲೈಮಾನಿ , ಈಗ ಕೊಯಮತ್ತೂರಿನಲ್ಲಿ ಚಹಾ ಅಂಗಡಿಯಲ್ಲಿ ತನ್ನ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ.

ಕ್ರೀಡಾ ವ್ಯಕ್ತಿಗಳಿಗೆ ಸರ್ಕಾರದಿಂದ ಯಾವುದೇ ಸಹಾಯ ಲಭಿಸುವುದಿಲ್ಲ. ಕುಟುಂಬವನ್ನು ಸಾಕಲು ನಾನು ಚಹಾ ಅಂಗಡಿಯಿಂದ ದಿನಕ್ಕೆ 400-500 ಗಳಿಸುತ್ತೇನೆ “ಕಲೈಮಾನಿ ಸುದ್ದಿ ಸಂಸ್ಥೆ ANI ಗೆ ತಿಳಿಸಿದರು.

ಈಗಲೂ ಕಲೈಮಾನಿ ದಿನಾ ಬೆಳಗ್ಗೆ ಸುಮಾರು 21 ಕಿ.ಮೀ. ಓಡುವ ಅಭ್ಯಾಸವನ್ನು ಮೈಗೂಡಿಸಿಕೊಂಡಿದ್ದಾರೆ.
ಕಲೈಮಾನಿ ಕ್ಲಾಸ್ 10 ರವರೆಗೆ ಓದಿದ್ದು, ತನ್ನ ಶಾಲಾ ದಿನಗಳಲ್ಲಿ ಕಬಡ್ಡಿ ಮತ್ತು ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು.

Leave a Reply