ಲಕ್ನೋ: ಅಂತರ್ ಧರ್ಮೀಯ ವಿವಾಹವಾಗಿರುವ ದಂಪತಿಗಳಿಗೆ ಪಾಸ್ ಪೋರ್ಟ್ ಕಛೇರಿಯ ಅಧಿಕಾರಿ ಪಾಸ್ ಪೋರ್ಟ್ ಅರ್ಜಿಯನ್ನು ನಿರಾಕರಿಸಿ ಅವಮಾನಿಸಿದ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ಈ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಮತ್ತು ನರೇಂದ್ರ ಮೋದಿಯವರ ಸಹಾಯ ಕೇಳಿ ಟ್ವೀಟ್ ಮಾಡಿದ್ದಾರೆ.

ಮುಹಮ್ಮದ್ ಅನಸ್ ಸಿದ್ದೀಕಿ, ತಾನ್ವಿ ಸೇಠ್ ಎಂಬುವವರನ್ನು 2007 ರಲ್ಲಿ ಮದುವೆಯಾಗಿದ್ದರು. ಅವರಿಗೆ ಈಗ 6 ವರ್ಷದ ಮಗು ಕೂಡ ಇದೆ. ಜೂನ್ 19, 2018 ರಂದು ಇಬ್ಬರು ಪಾಸ್ ಪೋರ್ಟ್ ಗಾಗಿ ಅರ್ಜಿ ಸಲ್ಲಿಸಿದ್ದರು.

ಪಾಸ್ ಪೋರ್ಟ್ ಕಛೇರಿಯಲ್ಲಿ ಎ ಮತ್ತು ಬಿ ಇಂಟರ್ ವ್ಯೂವ್ ಹಂತದಲ್ಲಿ ಪಾಸಾದ ದಂಪತಿಗಳು ಸಿ ಅಧಿಕಾರಿಯ ಬಳಿ ಬಂದಾಗ, ಇವರೊಂದಿಗೆ ಅನುಚಿತವಾಗಿ ವರ್ತಿಸಿ ಪಾಸ್ ಪೋರ್ಟ್ ಅರ್ಜಿಯನ್ನು ತಿರಸ್ಕರಿಸಿದ್ದಾರೆ.

“ನನ್ನ ಹೆಂಡತಿ ಕೌಂಟರ್ C5 ತಲುಪಿದಾಗ, ವಿಕಾಸ್ ಮಿಶ್ರಾ ಆಕೆಯ ದಾಖಲೆಗಳನ್ನು ಪರಿಶೀಲಿಸ ತೊಡಗಿದರು. ಗಂಡನ ಹೆಸರು ಓದಿದ ಬಳಿಕ ಆಕೆಯೊಂದಿಗೆ ಅನುಚಿತವಾಗಿ ಕಿರುಚಿದ್ದಾರೆ. ಈ ಸಂದರ್ಭದಲ್ಲಿ ನನ್ನ ಪತ್ನಿ ಅತ್ತಿದ್ದು, ದಾಖಲೆಗಳನ್ನು ಬದಲಿಸಿ ತರಬೇಕೆಂದು ಅಧಿಕಾರಿ ಸೂಚಿದರು ಎಂದು ನ್ಯೂಸ್ 18 ನೊಂದಿಗೆ ಮಾತನಾಡುತ್ತಾ ಅನಸ್ ಹೇಳಿದ್ದಾರೆ.

“ನಾವು ಹೆಸರನ್ನು ಬದಲಾಯಿಸಲು ಬಯಸುವುದಿಲ್ಲ, ನಮ್ಮ ಕುಟುಂಬಕ್ಕೆ ನಮ್ಮ ಹೆಸರುಗಳಿಂದ ಯಾವ ಸಮಸ್ಯೆಯೂ ಇಲ್ಲ ಎಂದು ನನ್ನ ಪತ್ನಿ ತಾನ್ವಿ ಅವರಲ್ಲಿ ಹೇಳಿದರು. ನಂತರ ಪಾಸ್ಪೋರ್ಟ್ ಅಧಿಕಾರಿ ಎಪಿಒ ಕಚೇರಿಗೆ ಹೋಗಲು ಹೇಳಿದರು. ನಂತರ ಮಿಶ್ರಾ ನನ್ನನ್ನು ಕರೆದು, ಹಿಂದೂ ಧರ್ಮಕ್ಕೆ ಮತಾಂತರವಾಗದೆ ನನ್ನ ಮದುವೆ ಅಂಗೀಕರಿಸಲಾಗುವುದಿಲ್ಲ ಎಂದರು ಎಂದು ಅನಸ್ ಹೇಳಿದರು.

ತಾನ್ವಿಯವರ ಟ್ವೀಟ್ ಗೆ ಕಮೆಂಟ್ ಮಾಡಿ ಕ್ಷಮೆಯಾಚಿಸಿದ RPO ಅಧಿಕಾರಿ, ಅನಾನುಕೂಲತೆಗಾಗಿ ವಿಷಾದಿಸುತ್ತೇವೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮರು ಟ್ವೀಟ್ ಮಾಡಿದ್ದಾರೆ‌.

Leave a Reply