ನವದೆಹಲಿ: ಪೆಟ್ರೋಲ್ ಡಿಸೇಲ್ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ನಿನ್ನೆ ಭಾರತ್ ಬಂದ್ ಬಳಿಕವೂ ತೈಲ ಬೆಲೆ ಏರಿಕೆ ಕಂಡು ಬಂದಿದೆ. ತೈಲ ಕಂಪೆನಿಗಳು ಸೋಮವಾರ ಪೆಟ್ರೋಲ್ ಡೀಸೆಲ್ ಬೆಲೆ ಏರಿಸಿದೆ.

ಪೆಟ್ರೋಲ್ ಬೆಲೆ ಲೀಟರ್ಗೆ 14 ಪೈಸೆ ಹೆಚ್ಚಳವಾಗಿ 88.26 ರೂ. ಮತ್ತು ಡೀಸೆಲ್ 15 ಪೈಸೆ ರೂ.ಗೆ ಏರಿಕೆಯಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಶನ್ (ಐಓಸಿ) ಪ್ರಕಟಿಸಿದೆ. ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 14 ಪೈಸೆ ಹೆಚ್ಚಳವಾಗಿ ಕ್ರಮವಾಗಿ 80.87 / ಲೀಟರ್ ಮತ್ತು ರೂ 72.97 / ಲೀಟರ್ಗೆ ಏರಿಕೆಯಾಗಿದೆ.

ನಿನ್ನೆ ತೈಲ ಬೆಲೆಯೇರಿಕೆ ವಿರೋಧಿಸಿ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ನೇತೃತ್ವದಲ್ಲಿ ಭಾರತ್ ಬಂದ್ ಆಚರಿಸಲಾಗಿತ್ತು, ಹಲವಾರು ಕಡೆಗಳಲ್ಲಿ ತೀವ್ರ ಪ್ರತಿಭಟನೆಯೂ ನಡೆದಿದೆಕೆ. ಆದ್ರೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚುತ್ತಲೇ ಇದೆ.

Leave a Reply