ಹೊಸದಿಲ್ಲಿ: ಪ್ರಸಿದ್ಧ ಸುಪ್ರೀಂಕೋರ್ಟ್ ವಕೀಲ ಪ್ರಶಾಂತ್ ಭೂಷಣ್‍ರ ಟ್ವೀಟ್ ಒಂದು ವೈರಲ್ ಆಗಿದ್ದು, ಕೇಂದ್ರ ಸರಕಾರ ಮೊದಲ ಗಡುವಿನಲ್ಲಿ 100 ಕೋಟಿ ರೂಪಾಯಿ ಮಾತ್ರ ಕೇರಳಕ್ಕೆ ಧನ ಸಹಾಯ ಬಿಡುಗಡೆಗೊಳಿಸಿದ್ದನ್ನು ಅವರು ಟೀಕಿಸಿದ್ದಾರೆ. ಕೇರಳದ ಜಲಪ್ರಳಯದಲ್ಲಿ ಸುಮಾರು 8000 ಕೋಟಿರೂಪಾಯಿ ನಷ್ಟ ಸಂಭವಿಸಿದೆ ಎಂದು ಪ್ರಾಥಮಿಕ ಅಂದಾಜು. ಕೇರಳ ಸರಕಾರ ಕೇಂದ್ರದಿಂದ 1220 ಕೋಟಿ ರೂಪಾಯಿ ಧನ ಸಹಾಯಕ್ಕಾಗಿ ಆಗ್ರಹಿಸಿತ್ತು. ಆದರೆ ಕೇಂದ್ರವು ಕೇರಳದ ನಷ್ಟವನ್ನು ಹಗುರವಾಗಿ ಪರಿಣಗಣಿಸಿದೆ ಎಂದು ಪ್ರಶಾಂತ್ ಭೂಷಣ್ ಸೂಚಿಸಿದ್ದಾರೆ.

ಕೇಂದ್ರ ಸರಕಾರ ನೀಡುವ 100 ಕೋಟಿ ರೂಪಾಯಿ ಎಲ್ಲಿಗೂ ಸಾಲದು ಎನ್ನುವ ಟೀಕೆ ಸಾರ್ವತ್ರಿಕವಾಗಿ ವ್ಯಕ್ತವಾಗುತ್ತಿದೆ. .

ಇದೇ ಸಂದರ್ಭದಲ್ಲಿ ಪ್ರಶಾಂತ್ ಭೂಷಣ್ ಕೇರಳಕ್ಕೆ ಕೇಂದ್ರ ಸರಕಾರ ನೀಡಿದ ಹಣವನ್ನು ಮತ್ತು ಕೇಂದ್ರಸರಕಾರದ ಜಾಹೀರಾತು ಖರ್ಚು ಹಾಗೂ ಪ್ರಧಾನಿ ನರೇಂದ್ರ ಮೋದಿಯ ಪ್ರವಾಸಕ್ಕಾಗಿ ಮಾಡಿರುವ ವೆಚ್ಚವನ್ನು ಪರಸ್ಪರ ತೂಗಿ ನೋಡಿ ಟ್ವೀಟ್ ಮಾಡಿದ್ದಾರೆ. ಇದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಪ್ರಶಾಂತ್ ಭೂಷಣ್ ಕೇರಳಕ್ಕಿಂತ ಕೇಂದ್ರ ಸರಕಾರಕ್ಕೆ ಜಾಹೀರಾತು ಮತ್ತು ಮೋದಿಯ ಪ್ರವಾಸ ಮುಖ್ಯವಾಗಿದೆ ಎಂದು ಬೆಟ್ಟು ಮಾಡಿದ್ದಾರೆ. ಪ್ರಧಾನಿ ಮೋದಿ ಪ್ರವಾಸಕ್ಕಾಗಿ 1484 ಕೋಟಿರೂಪಾಯಿ ವೆಚ್ಚ ಮಾಡಿದ್ದು ಒಂದೆಡೆಯಾದರೆ, ಇದೇವೇಳೆ ಕೇಂದ್ರ ಸರಕಾರ ಜಾಹೀರಾತಿಗಾಗಿ 4300 ಕೋಟಿ ರೂಪಾಯಿ ವೆಚ್ಚ ಮಾಡಿದೆ ಎಂದು ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದಾರೆ. ಕುಂಭ ಮೇಳಕ್ಕೆ 4200 ಕೋಟಿ ರೂಪಾಯಿ ಮತ್ತು ಶಿವಾಜಿ ಪ್ರತಿಮೆಗೆ 3600 ಕೋಟಿ ರೂಪಾಯಿ ಮತ್ತು ವಲ್ಲಭಭಾಯಿ ಪಟೇಲರ ಪ್ರತಿಮೆಗೆ 2989 ಕೋಟಿ ರೂಪಾಯಿ ಕೇಂದ್ರ ಸರಕಾರ ಬಿಡುಗಡೆಗೊಳಿಸುತ್ತಿದೆ ಎಂದು ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ.

Leave a Reply