ಹೊಸದಿಲ್ಲಿ: ಭಾರತ ಫ್ರಾನ್ಸ್ ರಫೇಲ್ ಫಾರ್ ವಿಮಾನ ವ್ಯವಹಾರ ಸ್ಟೇ ಮಾಡುವಂತೆ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯಲ್ಲಿ ವಾದ ಆಲಿಕೆಯನ್ನು ಮಾಡುವುದಾಗಿ ಸುಪ್ರೀಂಕೋರ್ಟುತಿಳಿಸಿದೆ. ವಿವಾದಿತ ವ್ಯವಹಾರವನ್ನುರದ್ದುಪಡಿಸಬೇಕೆಂದು ಆಗ್ರಹಿಸಿ ಸಾರ್ವಜನಿಕಹಿತಾಸಕ್ತಿಅರ್ಜಿಯನ್ನು ಮಹೋಹರ್‍ಲಾಲ್ ಶರ್ಮ ಎಂಬವರು ಸಲ್ಲಿಸಿದ್ದು ಮುಂದಿನವಾರ ಅರ್ಜಿಯಲ್ಲ ವಾದ ಆಲಿಸಲಾಗುವುದು ಎಂದು ಸುಪ್ರೀಂಕೋರ್ಟು ತಿಳಿಸಿದೆ.

ಚೀಫ್ ಜಸ್ಟಿಸ್ ದೀಪಕ್ ಮಿಶ್ರ, ಜಸ್ಟಿಸ್ ಖಾನ್ವಿಲ್ಕರ್, ಜಸ್ಟಿಸ್ ಚಂದ್ರೂಡರಿರುವ ಸುಪ್ರಿಂಕೋರ್ಟಿನ ಪೀಠ ಅರ್ಜಿಯನ್ನುಪರಿಗಣಿಸು ತೀರ್ಮಾನಿಸಿದೆ. ತುರ್ತು ಪ್ರಾಮುಖ್ಯತೆಯ ಪಟ್ಟಿಗೆ ಸೇರಿಸಿ ಮುಂದಿನ ವಾರ ವಾದವನ್ನುಆಲಿಸಲಾಗುವುದು ಎಂದು ಕೋರ್ಟು ತಿಳಿಸಿದೆ.

ಯುದ್ಧವಿಮಾನ ವ್ಯವಹಾರದಲ್ಲಿ ಹಲವಾರು ಅಕ್ರಮಗಳು ನಡೆದಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಒಪ್ಪಂದವನ್ನು ರದ್ದುಪಡಿಸಬೇಕೆಂದುಅರ್ಜಿದಾರರುಆಗ್ರಹಿಸಿದ್ದಾರೆ.
ರಫೇಲ್ ಒಪ್ಪಂದದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದರು. ಯುಪಿಎ ಸರಕಾರದ ಕಾಲದಲ್ಲಿ ಸಹಿಹಾಕಿದ್ದ ಒಪ್ಪಂದಕ್ಕೆ ಬಿಜೆಪಿಸರಕಾರ ಭಾರಿ ಮೊತ್ತವನ್ನು ಪಾವತಿಸಿದೆ. ಆರ್ಥಿಕ ಅವ್ಯವಹಾರ ಒಪ್ಪಂದದಲ್ಲಿ ನಡೆದಿದೆ ಎಮದು ರಾಹುಲ್ ಗಾಂಧಿ ಆರೋಪಿಸಿದ್ದರು.

Leave a Reply