ಜೈಪುರ: ರಾಜಸ್ಥಾನದ ಶಾಲೆಗಳಲ್ಲಿ ಇನ್ನು ಅಧ್ಯಯನ ತರಗತಿಗಳೊಂದಿಗೆ ಧರ್ಮದ ಶಿಕ್ಷಣ ನೀಡಲು ಸನ್ಯಾಸಿಗಳು ಪಾಟ ಮಾಡಲಿದ್ದಾರೆ.

ತಿಂಗಳ ಮೂರನೇಯ ಶನಿವಾರ ಶಾಲೆಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ತಿಂಗಳ ಮೊದಲ ಶನಿವಾರ ಪ್ರಸಿದ್ಧರಾದ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಅಭ್ಯಸಿಸಿ ಎರಡನೇಯ ಶನಿವಾರ ಧಾರ್ಮಿಕ ಮೌಲ್ಯಗಳನ್ನು ಪ್ರೇರೇಪಿಸುವ ಪಾಟಗಳು ನಾಲ್ಕನೇಯ ಶನಿವಾರ ಪ್ರಶ್ನೋತ್ತರ ಕಾರ್ಯಕ್ರಮ ಹಾಗೂ ಐದನೇಯ ಶನಿವಾರ ಧಾರ್ಮಿಕ ಮೌಲ್ಯಗಳಿಗೆ ಪೂರಕವಾದ ಆಟೋಟಗಳು ಅಲ್ಲದೆ ದೇಶಭಕ್ತಿ ಗೀತೆ ಮುಂತಾದ ಕಾರ್ಯಕ್ರಮಗಳೂ ನಡೆಯಲಿವೆ ಎಂದು ಸೆಕೆಂಡರಿ ಎಜ್ಯುಕೇಶನ್ ಡೈರೆಕ್ಟರ್ ಮುಖಾಂತರ ಹೊಸ ಆದೇಶ ಹೊರಡಿಸಲಾಗಿದೆ.

Leave a Reply