ಬಡತನದ ನಡುವೆಯೂ ಕಲಿಯಲು ಆಸಕ್ತಿ ಇರುವ ಮಕ್ಕಳ ಶಿಕ್ಷಣಕ್ಕೆ ಆಸರೆ ಆಗಿದ್ದರೆ ಈ ನಿವೃತ್ತ ಶಿಕ್ಷಕಿ. ಹತ್ತು ಬಡ ಮಕ್ಕಳಿಗೆ ಆಶ್ರಯ ನೀಡಿ ಅವರಿಗೆ ಕೈಯಾರೆ ಅಡುಗೆ ಮಾಡಿ ದಿನಾ ನೀಡುತ್ತಾರೆ ನಿವೃತ್ತ ಶಿಕ್ಷಕಿ ವೀಣಾ ಮೋಡಕ್ ಆಠವಲೆ. ಹುಬ್ಬಳಿ ನಗರದ ದೇವಾಂಗಪೇಟದ ತನ್ನ ಮನೆಯಲ್ಲಿ ಎಲ್ಲ ಮಕ್ಕಳಿಗೆ ಆಶ್ರಯ ನೀಡಿದ್ದಾರೆ.

ಧಾರವಾಡದಲ್ಲಿರುವ ನಿರ್ದಿಷ್ಟ ವರ್ಗಗಳ ಸಹ ನಿವಾಸ ಶಾಲೆಯಲ್ಲಿ ಎಂಟನೇ ತರಗತಿ ವರೆಗೆ ಓದಿ ನಂತರ ಮುಂದೇನು ಮಾಡಬೇಕು ಎಂಬ ಚಿಂತೆಯಲ್ಲಿದ್ದಾಗ ಆ ಮಕ್ಕಳಿಗೆ ನೆರವಿಗಾಗಿ ಮುಂದೆ ಬಂದರು ಈ ನಿವೃತ್ತ ಶಿಕ್ಷಕಿ ವೀಣಾ. ಮಾತ್ರವಲ್ಲ ಅವರು ಈ ವಿಷಯವನ್ನು ರೋಟರಿ ಕನ್ನಡ ಪ್ರೌಢ ಶಾಲೆಯ ಕಾರ್ಯದರ್ಶಿ ಬ್ರ್ಯಾಸೆಲ್ ಡಿಸೋಜ ರೊಂದಿಗೆ ಪ್ರಸ್ತಾಪಿಸಿದಾಗ ಆ ಹತ್ತು ಮಕ್ಕಳಿಗೆ ಅವರು ತಮ್ಮ ಶಾಲೆಯಲ್ಲಿ ಉಚಿತ ದಾಖಲಾತಿ ನೀಡಿದರು. ಮಕ್ಕಳ ವಸತಿ ಮತ್ತು ಊಟದ ವ್ಯವಸ್ಥೆ ಆಗದಿದ್ದಾಗ ಸ್ವತಃ ತಾವೇ ಮುತುವರ್ಜಿ ವಹಿಸಿ ಮನೆಯ ಮಹಡಿಯಲ್ಲಿ ಅವರಿಗೆ ಆಶ್ರಯ ನೀಡಿ ನಿತ್ಯ ಮಕ್ಕಳಂತೆ ಸಾಕುತ್ತಿದ್ದಾರೆ.

ಈ ಹತ್ತು ಮಕ್ಕಳಲ್ಲಿ ಆರು ಮಕ್ಕಳು ಅನಾಥರು. ಉಳಿದವರು ಕಡು ಬಡವರು. ಮಕ್ಕಳು ಓದಿನಲ್ಲೂ ಇತರ ಪಠ್ಯೇತರ ಚಟುವಟಿಕೆಯಲ್ಲೂ ಮುಂದಿದ್ದಾರೆ ಮತ್ತು ಆಸಕ್ತಿಯಿಂದ ಕಲಿಯುತ್ತಿದ್ದಾರೆ ಎಂದು ಶಿಕ್ಷಕಿ ವೀಣಾ ಹೇಳುತ್ತಾರೆ.

Leave a Reply