ಹೊಸದಿಲ್ಲಿ: ಮೋಪೆಡ್ ಕ್ಷೇತ್ರದ ದೈತ್ಯ ಎನ್‍ಫೀಲ್ಡ್ ಅಭಿಮಾನಿಗಳಿಗೆ ಸಂತಸದ ಸುದ್ದಿ ನೀಡಿದ್ದು, ಹೊಸದಾದ ಎರಡು ಮಾದರಿಗಳು ಎನ್‍ಫೀಲ್ಡ್ ಬಿಡುಗಡೆಗೊಳಿಸುತ್ತಿದೆ. ಇಂಟರ್ಸೆಪ್ಟರ್ ಮತ್ತು ಕೊಂಢಿನೆಂಟಲ್ ಜಿಟಿ650 ಮಾದರಿಗಳು. ಅಮೆರಿಕನ್ ಮಾರುಕಟ್ಟೆಯ ಬೆಲೆ ಘೋಷಣೆಯಾಗಿದೆ. ಇಂಟರ್‍ಸೆಪ್ಟರ್‍ಗೆ 5799 ಡಾಲರ್ ಬೆಲೆ ಸುಮಾರು 4;21ಲಕ್ಷರೂಪಾಯಿ. ಕಾಂಡಿನೆಂಟಲ್ ಜಿಟಿಗೆ 5999 ಡಾಲರ್ ಸುಮಾರು 43 ಲಕ್ಷರೂಪಾಯಿ ಬೆಲೆ . ಮಾದರಿಯ ಬಣ್ಣ ಬದಲಾದಂತೆ ಬೆಲೆಯಲ್ಲಿ ವ್ಯತ್ಯಾಸವಾಗಲಿದೆ. ಕ್ರೋಂ ಎಡಿಷನ್‍ಗೆ 6749 ಡಾಲರ್ ಸುಮಾರು 4.90 ಲಕ್ಷ ರೂಪಾಯಿ ಬೆಲೆ ನಿಗದಿಗೊಳಿಸಲಾಗಿದೆ.

ಈ ವರ್ಷ ಕೊನೆಯಲ್ಲಿ ಎರಡು ಮಾಡೆಲ್‍ಗಳು ಭಾರತದ ಮಾರ್ಕೆಟಿನಲ್ಲಿ ಬರಲಿದೆ. ಶೋ ರೂಂ ಬೆಲೆ 3 ಲಕ್ಷ ರೂಪಾಯಿ ಆಗಿರಲಿದೆ. ಬಿಎಂಡಬ್ಲ್ಯೂ ಜಿ310, ಕೆಟಿಎಂ 390 ಡ್ಯೂಕ್, ಕವಾಸಾಕಿ ನಿನ್ 300 ಮೊದಲಾದ ಬೈಕುಗಳ ಬೆಲೆಯಷ್ಟು ಬುಲೆಟ್‍ನ ದರ ಕೂಡ ತಲುಪಲಿದೆ. ಅಮೆರಿಕದ ಮಾರ್ಕೆಟಿನಲ್ಲಿ ಮಾರಾಟವಾಗುವ ಮಾದರಿಗಳಲ್ಲಿ ರಾಯಲ್ ಎನ್‍ಫೀಲ್ಡ್ ಮೂರು ವರ್ಷ ವಾರಂಟಿ ಮತ್ತು ರೋಡ್ ಸೈಟ್ ಅಸಿಸ್ಟೆಂಟ್ ಆರ್‍ಎಸ್‍ಎ ನೀಡಲಿದೆ.

ಹೊಸ ಚೇಸಿನಲ್ಲಿ ನಿರ್ಮಾಣವಾದ ಈ ಬೈಕುಗಳು 648 ಸಿಸಿಯದ್ದಾಗಿದ್ದು, ಏರ್ ಕೂಲ್ಡ್, ಎಸ್‍ಒಎಚ್‍ಸಿ, ಆರು ಸ್ಪೀಡ್ ಗೇರುಗಳು, ಒಂದು ಬ್ಲಿಪ್ ಅಸಿಸ್ಟೆಂಟ್ ಕ್ಲಚ್ ಸೌಲಭ್ಯ ಸಿಗಲಿದೆ. 2500 ಆರ್‍ಪಿಎಂನಲ್ಲಿ 40 ಎನ್‍ಎಂ ಟಾರ್ಕ್ ಲಭ್ಯವಾಗಲಿದೆ. 163 ಕಿಲೊಮೀಟರ್ ಗರಿಷ್ಠ ವೇಗವಾಗಿದ್ದು, ಈ ವರೆಗೆ ರಾಯಲ್ ಎನ್‍ಫೀಲ್ಡ್ ಹೊರತಂದ ಮಾದರಿಗಳಲ್ಲಿ ಅತೀ ವೇಗದ್ದು. 320 ಎಂಎಂ(ಡಿಸ್ಕ್ ಫಂಡ್)ಹಿಂಬದಿ ಚಕ್ರ(240 ಎಂಎಂ)ಬ್ರೇಕಿಂಗ್ ಫರ್ಮಾನ್ಸ್‍ನ್ನು ಹೊಂದಿದೆ.

Leave a Reply