ಅಹ್ಮದಾಬಾದ್: ವಜಾಗೊಂಡ ಐಪಿಎಸ್ ಅಧಿಕಾರಿ ಸಂಜೀವ್ ಭಟ್‍ರನ್ನು ಗುಜರಾತ್ ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಭಟ್ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ನಿರಂತರ ಟೀಕೆ ಮಾಡುತ್ತಿರುವ ವಿವಾದಿತ ವ್ಯಕ್ತಿಯಾಗಿದ್ದು ಹಳೆಯ ಪ್ರಕರಣವೊಂದರಲ್ಲಿ ಅವರನ್ನು ಗುಜರಾತ್ ಸಿಐಡಿ ತನ್ನ ಕಸ್ಟಡಿಗೆ ಪಡೆದು ವಿಚಾರಣೆಗೆ ಗುರಿಪಡಿಸಿದೆ.

ಕ್ರಿಮಿನಲ್ ಪ್ರಕರಣವೊಂದರಲ್ಲಿ ವಕೀಲರೊಬ್ಬರನ್ನು ಸಿಲುಕಿಸಲು ಯತ್ನಿಸಿದರು ಎನುವುದು ಭಟ್ ವಿರುದ್ಧ ಇರುವ ಆರೋಪವಾಗಿದ್ದು ಹತ್ತು ವರ್ಷದ ಹಿಂದೆ ಕೇಸುದಾಖಲಾಗಿತ್ತು. ಭಟ್‍ರನ್ನಲ್ಲದೆ ಇಬ್ಬರುಪೊಲೀಸಧಿಕಾರಿಗಳ ಸಹಿತ ಆರುಮಂದಿಯನ್ನು ಅವರೊಂದಿಗೆ ಸಿಐಡಿ ಪೊಲೀಸರು ಕಸ್ಟಡಿಗೆ ಪಡೆಯಲಾಗಿದ್ದು ಎಲ್ಲರ ವಿಚಾರಣೆ ನಡೆಯುತ್ತಿದೆ ಎಂದು ವರದಿಯಾಗಿದೆ.

1998ರಲ್ಲಿ ಬನಸ್ಕಂದದಲ್ಲಿ ಭಟ್ ಡಿಸಿಪಿ ಆಗಿದ್ದರು. ಆಗ ವಕೀಲರೊಬ್ಬರನ್ನು ನಕಲಿ ಪ್ರಕರಣದಲ್ಲಿ ಶಾಮೀಲು ಗೊಳಿಸಲು ಭಟ್ ಯತ್ನಿಸಿದರೆಂದು ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

2015ರಲ್ಲಿ ಭಟ್‍ರನ್ನು ಇಂಡಿಯನ್ ಪೊಲೀಸ್ ಸರ್ವಿಸ್‍ನಿಂದ ವಜಾಗೊಳಿಸಲಾಗಿತ್ತು. ಗುಜರಾತ್ ಗಲಭೆಯಲ್ಲಿ ನರೇಂದ್ರಮೋದಿ ಹಸ್ತವಿದೆ ಎಂದು ಭಟ್ ಸುಪ್ರೀಂಕೋರ್ಟಿನಲ್ಲಿ ಅಫಿದಾವಿತ್ ಸಲ್ಲಿಸಿದ್ದರು.

Leave a Reply