ಹೊಸದಿಲ್ಲಿ: ಪೊಲೀಸ್ ಮತ್ತು ನ್ಯಾಯಾಂಗವನ್ನು ಜೊತೆಗಿಟ್ಟು ಗುಜರಾತ್ ಸರಕಾರ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್‍ರ ಹಗೆ ತೀರಿಸುತ್ತಿದೆ ಎಂದು ಭಟ್ ಅವರ ಪತ್ನಿ ಶ್ವೇತ ಭಟ್ ಹೇಳಿದ್ದಾರೆ. ಸಂಜೀವ್ ಭಟ್‍ರ ಫೇಸ್‍ಬುಕ್ ಪ್ರೊಫೈಲಿನ ಮೂಲಕ ಶ್ವೇತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವವರನ್ನು ಸರಕಾರ ದಮನಿಸುತ್ತಿದೆ. ಫ್ಯಾಶಿಸಂ ವಿರುದ್ಧ ಹೋರಾಟ ಇದು. ಸಂಜೀವ್ ಭಟ್‍ರನ್ನು ಜೈಲಿನಿಂದ ಹೊರತರಲು ಎಲ್ಲರೂ ಬೆಂಬಲಿಸಬೇಕೆಂದು ಶ್ವೇತಾ ಭಟ್ ಹೇಳಿದರು.

ಪೊಲೀಸರನ್ನು ಮತ್ತು ನ್ಯಾಯಾಂಗವನ್ನು ವೈಯಕ್ತಿಕ ಸೇಡು ತೀರಿಸಲುದುರುಪಯೋಗಿಸುವ ಕಾಲ ಇದು. ಪತ್ರಕರ್ತರು ವೈಯಕ್ತಿಕ ಲಾಭಕ್ಕೆ ಪ್ರಾಮುಖ್ಯತೆ ನೀಡುತ್ತಿರುವ ಈ ಕಾಲದಲ್ಲಿ ಸತ್ಯ ಮತ್ತು ನ್ಯಾಯ ಗೆಲ್ಲಬಹುದು ಎಂದು ಮಾತ್ರ ನಿರೀಕ್ಷಿಸಲು ಸಾಧ್ಯವಿದೆ. ಸಂಜೀವ್ ಗಾಂಧಿ ಇಲ್ಲಿರುತ್ತಿದ್ದರೆ ಮಹಾತ್ಮಗಾಂಧಿಯ ಉವಾಚವನ್ನು ಉದ್ಧರಿಸುತ್ತಿದ್ದರು. ‘ ನಿರಾಶೆ ಅನಿಸಿದಾಗ ಇತಿಹಾಸದಲ್ಲಿ ಹೇಗೆ ಸತ್ಯ ಮತ್ತು ಪ್ರೀತಿ ಯಾವಾಗಲು ವಿಜಯಿಯಾಗಿದೆ ಎಂದು ನಾನು ಚಿಂತಿಸುತ್ತೇನೆ. ಸರ್ವಾಧಿಕಾರಿಗಳು ಕೊಲೆಗಡುಕರು ಎಲ್ಲ ಕಾಲದಲ್ಲಿ ಅಜೇಯರಾಗಿರುತ್ತಾರೆ ಎಂದು ಅನಿಸಬಹುದು. ಆದರೆ ಕೊನೆಯದಾಗಿ ಅವರು ಕುಸಿದು ಬಿದ್ದೇ ಬೀಳುತ್ತಾರೆ. ಸಂಜೀವ್‍ಭಟ್‍ರನ್ನು ಬೆಂಬಲಿಸಿದವರಿಗೆಲ್ಲ ಶ್ವೇತಾ ಭಟ್ ಫೇಸ್‍ಬುಕ್ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.

Leave a Reply