ಮುಂಬೈ: ಔರಂಗ ಝೇಬ್ ಎಂಬ ಸೈನಿಕನನ್ನು ಅಪಹರಿಸಿ ಕೊಂದ ಘಟನೆಯನ್ನು ಉಲ್ಲೇಖಿಸಿ ಕೇಂದ್ರ ಸರಕಾರವನ್ನು ಶಿವಸೇನೆ ತೀವ್ರವಾಗಿ ಟೀಕಿಸಿದ್ದು, ದೇಶದಲ್ಲಿ ರಕ್ಷಣಾ ಸಚಿವರು ಇದ್ದಾರೆಯೇ? ಎಂದು ಪ್ರಶ್ನಿಸಿದೆ. ನಿರ್ಮಲಾ ಸೀತರಾಮ್ ರಂತಹವರನ್ನು ಭಾರತದ ರಕ್ಷಣಾ ಸಚಿವೆಯನ್ನಾಗಿ ಮಾಡಿದರೆ ದೇಶಕ್ಕೆ ಅದರಿಂದ ಹಾನಿಯಾಗುತ್ತದೆ. ಸೇನೆಯ ಬಗ್ಗೆ ನಮಗೆ ನಂಬಿಕೆಯಿದೆ. ಆದರೆ ನಾಯಕತ್ವ ತೀರಾ ದುರ್ಬಲವಾಗಿದೆ ಎಂದು ಅದರಲ್ಲಿ ಹೇಳಲಾಗಿದೆ.

“ಯಾವುದೇ ಸಶಸ್ತ್ರ ಸವಾಲುಗಳನ್ನು ನಿಭಾಯಿಸಲು ನಮ್ಮ ದೇಶದ ಸಶಸ್ತ್ರ ಪಡೆಗಳು ಸಿದ್ಧರಾಗಿದ್ದಾರೆ ಎಂದು ನಮ್ಮ ಮೂರು ಸೇನಾ ಮುಖ್ಯಸ್ಥರು ಭರವಸೆ ನೀಡಿದ್ದಾರೆ. ನಮ್ಮ ಸಶಸ್ತ್ರ ಪಡೆಗಳ ಸಾಮರ್ಥ್ಯ ಬಗ್ಗೆ ನಾವು ಸಂಪೂರ್ಣವಾಗಿ ನಂಬಿಕೆ ಹೊಂದಿದ್ದೇವೆ, ಆದರೆ ನಾಯಕತ್ವವು ಅಸಮರ್ಥವಾಗಿದೆ. ಇಲ್ಲದಿದ್ದರೆ ಭಾರತೀಯ ಸೈನಿಕ ಔರಂಗಜೇಬ್ ಮೊಹಮ್ಮದ್ ಹನೀಫ್ನನ್ನು ಭಯೋತ್ಪಾದಕರು ಕೊಲ್ಲಲು ಧೈರ್ಯ ಮಾಡುತ್ತಿರಲಿಲ್ಲ” ಎಂದು ಪಕ್ಷದ ಮುಖವಾಣಿ ಸಾಮ್ನಾ ದಲ್ಲಿ ಹೇಳಿದೆ.

ಮೊಘಲ್ ಚಕ್ರವರ್ತಿ ಔರಂಗಜೇಬ್ ನನ್ನು ಟೀಕಿಸಿದ ಶಿವಸೇನೆ ಅದೇ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರದ ಈ ಸೈನಿಕ ಔರಂಗಜೇಬನನ್ನು ನಾವು ಆರಾಧಿಸುತ್ತೇವೆ. ಔರಂಗಜೇಬ್ನ (ಹನೀಫ್) ಶೌರ್ಯ ಮತ್ತು ತ್ಯಾಗ ಇಡೀ ದೇಶಕ್ಕೆ ಸ್ಪೂರ್ತಿ ಆಗಿದೆ. ಈ ಹುತಾತ್ಮನನ್ನು ಸರ್ಕಾರ ಗೌರವಿಸಬೇಕು ಎಂದು ಶಿವಸೇನೆ ಒತ್ತಾಯಿಸಿದೆ.

Leave a Reply