ನ್ಯೂಯಾರ್ಕ್: ಮ್ಯಾನ್ಮಾರ್‍ನ ನಾಯಕಿ ಆಂಗ್‍ಸಾನ್ ಸೂಕಿ ರಾಜೀನಾಮೆ ನೀಡಬೇಕೆಂದು ವಿಶ್ವಸಂಸ್ಥೆ ಹೇಳಿದೆ. ರೋಹಿಂಗ್ಯನ್ನರ ವಿಷಯದಲ್ಲಿ ಮೌನ ವಹಿಸಿದ ಸೂಕಿ ರಾಜೀನಾಮೆ ನೀಡಬೇಕೆಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಮುಖ್ಯಸ್ಥ ರಅದ್ ಅಲ್ ಹುಸೈನ್ ಆಗ್ರಹಿಸಿದ್ದಾರೆ.

ಕಳೆದ ವರ್ಷ ಮ್ಯಾನ್ಮಾರ್ ಸೇನೆ ರೋಹಿಂಗ್ಯನ್ ಮುಸ್ಲಿಮರ ನರಮೇಧ ನಡೆಸಿತ್ತಿದ್ದಾಗ ಅದನ್ನು ತಡೆಯಲು ಏನೂ ಮಾಡದೆ ಕೇವಲ ತೀವ್ರ ವಿಷಾದವನ್ನು ವ್ಯಕ್ತಪಡಿಸಿ ತಪ್ಪಿಸಿಕೊಳ್ಳಲು ನೋಡುತ್ತಿದ್ದಾರೆ ಎಂದು ಅಲ್ ಹುಸೈನ್ ಹೇಳಿದರು.

ಅಂದು ಸೂಕಿ ಅಧಿಕಾರದಲ್ಲಿಲ್ಲದ ಮಹಿಳೆ ಆಗಿರಲಿಲ್ಲ. ಅವರು ಮ್ಯಾನ್ಮಾರ್ ಸರಕಾರದಲ್ಲಿ ಪ್ರಬಲ ಹುದ್ದೆ ಹೊಂದಿದ್ದಾರೆ. ಅಧಿಕಾರ ಬಳಸಿಕೊಂಡು ಅವರಿಗೆ ಸೇನೆಯನ್ನು ನಿಯಂತ್ರಿಸಬಹುದಾಗಿತ್ತು. ಆದರೂ ಅವರು ಮೌನವನ್ನು ವಹಿಸಿದರು ಎಂದಿರುವ ಅಲ್ ಹುಸೈನ್ ಇದಕ್ಕಿಂತ ರಾಜೀನಾಮೆ ನೀಡುವುದು ಉತ್ತಮವಾಗಿದೆ ಎಂದು ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಅಲ್ ಹುಸೈನ್ ಹೇಳಿದರು.

Leave a Reply