ಗೋಧಿ ಹುಲ್ಲಿನ ರಸವನ್ನು ಕುಡಿಯುವುದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ವಿಷಗಳನ್ನು ತೆಗೆಯಲು ಒಂದು ಅದ್ಭುತವಾದ ಆಹಾರವಾಗಿದೆ. ಟ್ರಿಟಿಶಿಯಂ ಏಸ್ಟಿವಂ ಎಂಬ ಹೆಸರಿನ ಈ ಗೋಧಿ ಹುಲ್ಲು ಪ್ರಪಂಚದ ಹಲವಾರು ದೇಶಗಳಲ್ಲಿ ಬೆಳೆಯುತ್ತದೆ. ಈ ಹುಲ್ಲು ಕಬ್ಬಿಣಾಂಶ, ವಿಟಮಿನ್, ಕ್ಯಾಲ್ಸಿಯಂ, ಮೇಗ್ನಿಶಿಯಂ, ಸಲೆನಿಯಂ ಮುಂತಾದುವುಗಳನ್ನು ಒಳಗೊಂಡಿರುವ ಸಸ್ಯವಾಗಿದೆ. ಈ ಹುಲ್ಲು ಜೀರ್ಣ ಕಾರ್ಯಕ್ಕೆ ಕಷ್ಟವಾಗುವ ಕಾರಣ ಅದನ್ನು ಅರೆದು ಅದರ ರಸವನ್ನು ಕುಡಿಯುವುದು ಹೆಚ್ಚು ಪ್ರಯೋಜನಕರವಾಗಿದೆ. ಅದು ಕಹಿಯಾಗಿದ್ದರೂ, ಅದನ್ನು ನೀರಿಗೆ ಹಾಕಿ ಕುಡಿಯುವುದರಲ್ಲೂ ಯಾವುದೇ ಅಡ್ಡಿಯಿಲ್ಲ. ಆದರೆ ತಜ್ಞರ ಪ್ರಕಾರ ಗೋಧಿ ಹುಲ್ಲು ಅತಿಯಾಗಿ ಸೇವಿಸಿದರೆ ದೇಹಕ್ಕೆ ಒಳ್ಳೆಯದಲ್ಲ.

ಗೋಧಿ ಹುಲ್ಲಿನ ಕೆಲವು ಪ್ರಯೋಜನಗಳು ಇಂತಿವೆ:

  • ಗೋಧಿ ಹುಲ್ಲಿನ ರಸದಲ್ಲಿ ಶೇಕಡ 65-70ರಷ್ಟು ಡ್ಲೋರೋಫಿಲ್ ಇದ್ದು. ಇದು ರಕ್ತದ ಉತ್ಪಾದನೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದು ಹಾನಿಕಾರಕ ಬ್ಯಾಕ್ಟೀರಿಯಾಗಳು ಬೆಳೆಯುವುದನ್ನು ತಪ್ಪಿಸಲು ಬೇಕಾದ ಗುಣಗಳನ್ನು ಹೊಂದಿರುತ್ತದೆ.
  • ವಾರದಲ್ಲಿ ಒಮ್ಮೆ ಒಂದು ಲೋಟ ಗೋಧಿ ಹುಲ್ಲಿನ ರಸವನ್ನು ಕುಡಿಯುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರ ತೆಗೆಯುತ್ತದೆ ಮತ್ತು ಜೀರ್ಣಕಾರ್ಯವು ಸುಸೂತ್ರವಾಗಿ ನಡೆಯಲು ಅನುವು ಮಾಡಿಕೊಡುತ್ತದೆ.
  • ಗೋಧಿ ಹುಲ್ಲಿನಲ್ಲಿರುವ ಡ್ಲೋರೋಫಿಲ್ ದೇಹದಲ್ಲಿನ ಆಮ್ಞಜನಕದ ಪ್ರಮಾಣವನ್ನು ಹೆಚ್ಚಿಸುವುದಲ್ಲದೇ, ದೇಹದಲ್ಲಿನ ಸಕ್ಕರೆಯ ಪ್ರಮಾಣವನ್ನು ಹತೋಟಿಯಲ್ಲಿಡುತ್ತದೆ.
  • ಗೋಧಿ ಹುಲ್ಲು ನಮ್ಮ ಚರ್ಮಕ್ಕೆ ಒಳ್ಳೆಯದು. ನಿಯಮಿತವಾಗಿ ಗೋಧಿ ಹುಲ್ಲಿನ ರಸವನ್ನು ಕುಡಿಯುವುದರಿಂದ ಚರ್ಮದಲ್ಲಿರುವ ಹಚ್ಚೆಗಳು ಕಡಿಮೆಯಾಗುತ್ತವೆ.
  • ಗೋಧಿ ಹುಲ್ಲಿನ ರಸವು ನಮ್ಮ ಹಲ್ಲನ್ನು (ಹುಳುಕು ಆಗುವುದರಿಂದ) ರಕ್ಷಿಸುತ್ತದೆ.
  • ದಿನಾಲೂ ಎರಡು ಲೋಟ ಗೋಧಿ ಹುಲ್ಲಿನ ರಸವನ್ನು ಕುಡಿಯುವುದರಿಂದ ಪೈಲ್ಸ್ ಗುಣಮುಖವಾಗುತ್ತದೆ.
  • ನಿಯಮಿತವಾಗಿ ಗೋಧಿ ಹುಲ್ಲಿನ ರಸವನ್ನು ಕುಡಿಯುವುದರಿಂದ ದಿನನಿತ್ಯದ ಕೆಲಸಗಳಿಗೆ ಶಕ್ತಿ ಹೆಚ್ಚುತ್ತದೆ.

Leave a Reply