ಮಧ್ಯ ಪ್ರದೇಶದ ಮುಖ್ಯ ಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಂಚರಿಸುತ್ತಿರುವ ವಾಹನದ ಮೇಲೆ ಕಲ್ಲು ತೂರಾಟ

ನಡೆದಿದೆ. ಜಿಲ್ಲಾ ಕೇಂದ್ರಕ್ಕಿಂತ 25 ಕಿಮೀ ದೂರದ ಪ್ರಧೇಶದಲ್ಲಿ ಬರಲಿರುವ ವಿಧಾನಸಬಾ ಚುನಾವಣೆಯ ಕುರಿತಾಗಿ ರಾಜ್ಯದಾದ್ಯಂತದ ಪ್ರವಾಸದ ಮದ್ಯೆ ಸಿದ್ದಿ ಜಿಲ್ಲೆ ಪ್ರವೇಶಿಸಿದಾಗ ಈ ಘಟನೆ ನಡೆದಿದೆ.

ಕಲ್ಲು ತೂರಾಟ ನಡೆಸಿದ ಪ್ರತಿಭಟನಾಕಾರರು ಕಪ್ಪು ಬಾವುಟವನ್ನು ಪ್ರದರ್ಶಿಸಿದರು. ಇದು ವಿರೋಧ ಪಕ್ಷದ ನಾಯಕ ಅಜಯ್ ಸಿಂಗ್ ಪ್ರತಿನಿಧಿಸುವ ಕ್ಷೇತ್ರವಾಗಿತ್ತು ಎಂದು ಬಿಜೆಪಿಯ ವಕ್ತಾರ ರಜನೀಶ್ ಅಗರ್ವಾಲ್ ತಿಳಿಸಿದ್ದಾರೆ.

ನಂತರ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಚೌಹಾಣ್, ಶಕ್ತಿಯಿದ್ದರೆ ನೇರವಾಗಿ ಹೋರಾಡಿ ಎಂದು ಸವಾಲೆಸೆದಿದ್ದಾರೆ. ರಥವನ್ನು ಹೋಲುವ ಮಿನಿ ಬಸ್ಸೊಂದರಲ್ಲಿ ಚೌಹಾಣ್ ಪ್ರಯಾಣಿಸುತ್ತಿದ್ದರು. ಮುಖ್ಯಮಂತ್ರಿಗಳಿಗೆ ಯಾವುದೇ ಗಾಯವಾಗಿಲ್ಲ ಎಂದು ಪೋಲೀಸಧಿಕಾರಿಗಳು ತಿಳಿಸಿದ್ದಾರೆ.

ಈ ಸಂಬಂಧಿ 9 ಮಂದಿಯನ್ನು ಬಂಧಿಸಲಾಗಿದ್ದು, ಪಟೇಲ್ (52), ಪಂಕಜ್ ಸಿಂಗ್ ಚೌಹಾಣ್ (32), ಗೌರವ್ ಸಿಂಗ್ ಚೌಹಾಣ್ (21), ರೋಶನ್ ಸಿಂಗ್ (18), ಸೌರಭ್ ದ್ವಿವೇದಿ (19), ಶಿವೇಂದ್ರ ಸಿಂಗ್ (24), ಸೌರಭ್ ಸಿಂಗ್ (21), ಚರಣ್ ಸಿಂಗ್ (21) ಮತ್ತು ಸಂಜಯ್ ಸಿಂಗ್ (28) ಎಂದು ಗುರುತಿಸಲಾಗಿದೆ.

Leave a Reply