ಮುಂಬೈ: ರಾಷ್ಟ್ರಪಿತ ಮಹಾತ್ಮಾಗಾಂಧಿಯ ಕೊಲೆಯನ್ನು ಆಚರಿಸಿದವರು ಇಂದು ದೇಶವನ್ನಾಳುತ್ತಿದ್ದಾರೆ ಎಂದು ಬಾಲಿವುಡ್ ನಟಿ ಸ್ವರಭಾಸ್ಕರ್ ಹೇಳಿದ್ದಾರೆ. ಅವರಲ್ಲಿ ಯಾರನ್ನು ಯಾರೂ ಜೈಲಿಗೆ ಹಾಕಲಿಲ್ಲ ಎಂದು ಸ್ವರ ಜನರನ್ನು ಜೈಲಿಗಟ್ಟಲು ಸಮಾಜ ರಕ್ತದಾಹಿ ಆಗಬಾರದು ಎಂದು ಹೇಳಿದರು.

ದಿಲ್ಲಿಯಲ್ಲಿ ಪತ್ರಕರ್ತರ ಜೊತೆ ಸಮಾಲೋಚನೆಯ ವೇಳೆ ನಟಿ ತನ್ನ ಅಭಿಪ್ರಾಯ ವನ್ನು ತಿಳಿಸಿದರು” ಈ ದೇಶದಲ್ಲಿ ನಮ್ಮ ರಾಷ್ಟ್ರಪಿತ ಮಹಾತ್ಮಾಗಾಂಧೀಜಿಯವರನ್ನು ಮತ್ತು ಅಷ್ಟೊಂದು ಉತ್ತಮವಾದ ಮನುಷ್ಯನ ಕೊಲೆ ನಡೆಯಿತು. ಅಂದು ಕೆಲವು ಮಂದಿ ಆ ಕೊಲೆಯನ್ನು ಆಚರಿಸಿದವರು ಇದ್ದರು. ಅವರು ಇಂದು ದೇಶವನ್ನು ಆಳುತ್ತಿದ್ದಾರೆ. ಅವರೆಲ್ಲರನ್ನೂ ಜೈಲಿಗಟ್ಟುತ್ತೇವೋ. ಇಲ್ಲ” ಎಂದು ಸ್ವರ ಹೇಳಿದರು.

1980ರಲ್ಲಿ ಪಂಜಾಬಿನಲ್ಲಿ ನಡೆದ ಭಯೋತ್ಪಾದನ ಚಟುವಟಿಕೆಗಳ ಕುರಿತು ಅವರು ಹೇಳಿದರು” ಪಂಜಾಬ್‍ನಲ್ಲಿ ಕೊಲೆಯಾದ ಜರ್ನೈಲ್ ಸಿಂಗ್ ಭಿಂದ್ರನ್ವಾಲೆ ಎಂಬ ಭಯೋತ್ಪಾದಕನನ್ನು ಜನರು ಪ್ರಶಂಸಿದ ಜರ್ನೈಲ್ “ಎಂದು ಹೇಳಲಾಯಿತು. ಆದರೂ ಅವರನ್ನೆಲ್ಲ ಯಾರೂ ಜೈಲಿಗಟ್ಟಲಿಲ್ಲ” ಎಂದು ಸ್ವರ ಭಾಸ್ಕರ್ ಹೇಳಿದರು.

Leave a Reply