ಇದೀಗ ವಿಶ್ವಹಿಂದೂ‌ ಪರಿಷತ್ ನ ಅಂತಾರಾಷ್ಟ್ರೀಯ ಮುಖಂಡ ಪ್ರವೀಣ್ ಭಾಯ್ ತೊಗಾಡಿಯಾ, ಯುವಕ ಮತ್ತು ಯುವತಿಯರು ಪರಸ್ಪರ ಪ್ರೀತಿಸುವುದು ಅವರ ಹಕ್ಕಾಗಿದೆ, ಪ್ರೀತಿಸಲು ಅವರಿಗೆ ಎಲ್ಲಾ ರೀತಿಯ ಅಧಿಕಾರಗಳಿವೆ ಹಾಗೂ ಆ ಅಧಿಕಾರವನ್ನು ಅವರಿಗೆ ಮುಕ್ತ ಮನಸ್ಸಿನಿಂದ ಕೊಡಬೇಕಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

Image result for togadiya

ಚಂಡಿಘಡದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದು, ಮದುವೆಯಾಗಬೇಕಾದರೆ ಪ್ರೀತಿಸಲೇಬೇಕು, ಪ್ರೀತಿಸದಿದ್ದರೆ , ಮದುವೆಯಾಗದಿದ್ದರೆ ಸೃಷ್ಟಿ ಕಾರ್ಯವು ನಡೆಯಲು ಸಾಧ್ಯವಿಲ್ಲ. ಇಂತಹ ಪ್ರೀತಿಗೆ ನಾವು ಅಡ್ಡಿಯಾಗುವುದಿಲ್ಲ. ನಾವು ಅದರ ಹೆಸರಿನಲ್ಲಿ ನಡೆಯುವ ಹಿಂಸೆಯನ್ನು ವಿರೋಧಿಸುತ್ತೇವೆ ಎಂದಿದ್ದಾರೆ.

ಹಲವಾರು ವರ್ಷಗಳಿಂದ ಹಿಂದೂಪರ ಕಟ್ಟರ್ ವಾದಿ ಸಂಘಟನೆಗಳು ಪ್ರೇಮಿಗಳ ದಿನದಲ್ಲಿ ವಿರೋಧ ಪ್ರತಿಭಟನೆ ನಡೆಸುತ್ತಿದೆ.

Related image

ಪ್ರವೀಣ್ ತೊಗಾಡಿಯಾ ಫೆಬ್ರವರಿ 11 ರಂದು ವಿಎಚ್ಪಿ ಮತ್ತು ಚಂಡೀಘಢ ಬಜರಂಗ ದಳದ ಕಾರ್ಯಕರ್ತರನ್ನು ಸಂಬೋಧಿಸುತ್ತಾ

“ಯುವಕ ಮತ್ತು ಯುವತಿಯರಿಗೆ ಪ್ರೀತಿಸುವ ಹಕ್ಕಿದೆ. ಅವರು ಆ ಹಕ್ಕು ಪಡೆಯಬೇಕು. ನಾನು ನಮ್ಮ ಮಗಳು ಪ್ರೀತಿಯ ಹಕ್ಕನ್ನು ಹೊಂದಿದ್ದಾಳೆ. ನಮ್ಮ ತಂಗಿ ಕೂಡ ಪ್ರೀತಿಯ ಹಕ್ಕಿದೆ ಎಂದು ಸಂದೇಶವನ್ನು ತಲುಪಿಸಲಾಗುತ್ತಿದೆ ಎಂದಿದ್ದಾರೆ.

Image result for indian valintince day
ಸಾಂದರ್ಭಿಕ ಚಿತ್ರ

ಆದರೂ ವಿಎಚ್ಪಿ ಮತ್ತು ಬಜರಂಗ ದಳ ಭಾರತದಲ್ಲಿ ವ್ಯಾಲೆಂಟೈನ್ಸ್ ಡೇ ನಿಷೇಧಿಸುವ ಬೇಡಿಕೆ ಮಾಡಿದೆ. ಎರಡೂ ಸಂಘಟನೆಗಳು ಅದನ್ನು ಹಿಂದೂ ವಿರೋಧಿ, ಭಾರತ-ವಿರೋಧಿ ಎಂದು ಪರಿಗಣಿಸಿವೆ. ಪ್ರತಿ ವರ್ಷ ಫೆಬ್ರವರಿ 14 ರಂದು ವ್ಯಾಲೆಂಟೈನ್ಸ್ ಡೇ ಆಚರಿಸಲಾಗುತ್ತದೆ.

Related image
ಸಾಂದರ್ಭಿಕ ಚಿತ್ರ

Leave a Reply