ಪುರುಷರಂತೆ ವರ್ತಿಸು. ನಾನು ಬೆಳೆಯುತ್ತಿದ್ದಾಗ ಅನೇಕ ಬಾರಿ ಕೇಳಿದ ಮಾತು. ಆದರೆ ನನಗೆ ತಿಳಿದಿಲ್ಲದೆ ನಾನು ಕಲೆಗಳನ್ನು ಪ್ರೀತಿಸುತ್ತಿದ್ದೆ, ಬಣ್ಣಗಳನ್ನು ಇಷ್ಟ ಪಡುತ್ತಿದ್ದೆ ಮತ್ತು ಹುಡುಗಿಯರಂತೆ ಉಡುಪು ಧರಿಸಲು ಬಯಸುತ್ತಿದ್ದೆ.

ಶಾಲೆಯಲ್ಲಿ, ಯಾವಾಗಲೂ ನನ್ನ ಸಹಪಾಠಿಗಳು ಅಪಹಾಸ್ಯ ಮಾಡುತ್ತಿದ್ದರು. ಅವಹೇಳನಕಾರಿ ಪದಗಳನ್ನು ಬಳಸುತ್ತಿದ್ದರು.

ನಾನು ಯಾವಾಗಲೂ ಹುಡುಗಿಯರೊಂದಿಗೆ ಸ್ನೇಹ ಬೆಳೆಸುತ್ತಿದ್ದೆ ಮತ್ತು ಹುಡುಗರೊಂದಿಗೆ ಎಂದಿಗೂ ಆಟೋಟಗಳಲ್ಲಿ ಸೇರುತ್ತಿರಲಿಲ್ಲ.

ನನ್ನ ತಂದೆ ಈ ಬಗ್ಗೆ ಬಹಳ ಬಾರಿ ತಕರಾರು ಮಾಡಿದರು. ಬಹಳಷ್ಟು ಬಾರಿ ಜೋರು ಮಾಡಿದರು. ಆದರೆ ನಾನು ಎಂದಿಗೂ ಬದಲಾಗಲಿಲ್ಲ. ನಾನು ಕುಟುಂಬದ ಹೆಸರನ್ನು ಹಾಳು ಮಾಡುತ್ತಿದ್ದೇನೆ ಎಂದು ಅವರು ಯಾವಾಗಲೂ ಹೇಳುತ್ತಿದ್ದರು.

ನಾನು ಕಲಿಕೆಯಲ್ಲಿ ಬಹಳ ಮುಂದಿದ್ದೆ. ಯಾವಾಗಲೂ ಅಗ್ರ ಮೂರನೇ ರ‌್ಯಾಂಕ್ ಗಳಿಸುತ್ತಿದ್ದೆ. ರ‌್ಯಾಗಿಂಗ್ ಕಾರಣದಿಂದ ಕಾಲೇಜು ತೊರೆಯಬೇಕಾಯಿತು.
ನನ್ನ ನಡವಳಿಕೆ ನೋಡಿ ಎಲ್ಲರೂ ಗೇಲಿ ಮಾಡುತ್ತಿದ್ದರು .

ಮನೆಯಲ್ಲಿ, ನಾನು ರಹಸ್ಯವಾಗಿ ನನ್ನ ತಾಯಿಯ ಸೀರೆಗಳಲ್ಲಿ ಧರಿಸುತ್ತಿದ್ದೆ ಮತ್ತು ಮೇಕಪ್ ಮಾಡುತ್ತಿದ್ದೆ. ಒಂದು ದಿನ, ನನ್ನ ತಂದೆ ನನ್ನ ಬಟ್ಟೆಗಳನ್ನು ಸುಟ್ಟು, ನನ್ನ ಮೇಕಪ್ ಪೆಟ್ಟಿಗೆಯನ್ನು ಪುಡಿ ಮಾಡಿದರು.

ನನಗೆ ಆನುವಂಶಿಕ ಅಸ್ವಸ್ಥತೆಗಳು ಮತ್ತು ವರ್ಣತಂತುಗಳ ಸಮಸ್ಯೆ ಇದೆ ಎಂದು ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದಾಗ ಅಧ್ಯಾಪಕರು ಹೇಳಿದರು. ನಾನು ಅಂತರ್ಜಾಲದಲ್ಲಿ ಗಂಟೆಗಳ ಕಾಲ ಹುಡುಕಿ ಟ್ರಾನ್ಸ್ಜೆಂಡರ್ಗಳ ಬಗ್ಗೆ ಓದಿದೆ.
ನನ್ನೊಳಗಿದ್ದ ಮಹಿಳೆಯನ್ನು ಯಾರೂ ಅರ್ಥೈಸಲಿಲ್ಲ. ಕೊನೆಗೆ ಮನೆ ತೊರೆದು ಹೊರಗೆ ಬಂದೆ. ಅಲ್ಲಿಂದ ನನ್ನ ಹೊಸ ಪಯಣ ಪ್ರಾರಂಭವಾಯಿತು.

ಆರಂಭದಲ್ಲಿ ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದರ ಬಗ್ಗೆ ಭಯ ಇತ್ತು. ಮುಂದೆ ಕೆಲಸ ಪಡೆಯುವ ಗುರಿ ಇತ್ತು. ಹಲವಾರು ಇಂಟರ್ ವ್ಯೂ ಎದುರಿಸಿದೆ. ಒಂದೆಡೆ ನನ್ನಂತವರಿಗೆ ಉದ್ಯೋಗ ಇದೆ ಎಂದು ಸ್ನೇಹಿತೆ ಹೇಳಿದಾಗ ಅಲ್ಲಿಗೆ ಹೋದೆ.
ಈಗ ನಾನು ಜನಪ್ರಿಯವಾದ ಎಮ್ಎನ್ಸಿ ಯಿಂದ ನೇಮಕಗೊಂಡ ಮೊದಲ ಟ್ರಾನ್ಸ್ಜೆಂಡರ್ ಹೆಚ್ಆರ್ ಎಕ್ಸಿಕ್ಯುಟಿವ್ ಆಗಿದ್ದೇನೆ. ಮೊದಲ ದಿನ ಆತಂಕ ಮುಜುಗರ ಇತ್ತು. ನಂತರ ಎಲ್ಲವೂ ಸರಿಯಾಯಿತು. ಮಾತ್ರವಲ್ಲ, ಅಲ್ಲಿ ನಾನು ಮಹಿಳಾ ಶೌಚಾಲಯವನ್ನು ಬಳಸುತ್ತೇನೆ.

ನಾನು ಒಬ್ಬನೊಂದಿಗೆ ಸುದೀರ್ಘ ಸಂಬಂಧದಲ್ಲಿದ್ದೇನೆ. ಶೀಘ್ರದಲ್ಲೇ ಅವರ ಪೋಷಕರನ್ನು ಭೇಟಿ ಮಾಡುತ್ತೇನೆ. ಅವರು ನನ್ನನ್ನು ಅಂಗೀಕರಿಸುವರು ಮತ್ತು ನನ್ನನ್ನು ಇಷ್ಟ ಪಡುತ್ತಾರೆ ಎಂಬ ಭರವಸೆ ಇದೆ.

ನಾನು ನಿಶಾಂತ್, ನಾಚಿಕೆ ಅಂತರ್ಮುಖಿಯಾಗಿ ಹುಟ್ಟಿದ್ದೆ ಆದರೆ ಇಂದು ನಾನು ಝಾರ ಶೇಖಾ, (ರಾಜಕುಮಾರಿಯ ಈಜಿಪ್ಟ್) ಈಗ ನನ್ನಲ್ಲಿ ಪ್ರಪಂಚವನ್ನು ವಶಪಡಿಸಿಕೊಳ್ಳುವ ವಿಶ್ವಾಸ ತುಂಬಿದೆ!

ಝಾರ ಶೇಖಾ
ಕೃಪೆ : Being you ಫೇಸ್‌ಬುಕ್‌ ಪೇಜ್

Leave a Reply