ನವದೆಹಲಿ: 2017-18ರ ಅವಧಿಯಲ್ಲಿ ದೇಶದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) 6.5 ಶೇ. ರಷ್ಟಕ್ಕೆ ಇಳಿಕೆಯಾಗಲಿದ್ದು, ನಾಲ್ಕು ವರ್ಷಗಳಲ್ಲೇ ಅತಿ ಕಡಿಮೆ ಜಿಡಿಪಿ ಬೆಳವಣಿಗೆ ಇದಾಗಿದೆ. ಮಾತ್ರವಲ್ಲ ಹಿಂದಿನ ಹಣಕಾಸು ವರ್ಷದಲ್ಲಿ 7.1 ಶೇಕಡಾ ಜಿಡಿಪಿ ಬೆಳವಣಿಗೆಗಿಂತ ಬೆಳವಣಿಗೆ ಕಡಿಮೆ ಎಂದು ಕೇಂದ್ರ ಅಂಕಿಅಂಶಗಳ ಕಚೇರಿ (ಸಿ.ಎಸ್.ಓ) ಶುಕ್ರವಾರ ಬಿಡುಗಡೆ ಮಾಡಿರುವ ಮಾಹಿತಿ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಇದೇ ಅತ್ಯಂತ ಕಡಿಮೆ ಜಿಡಿಪಿ ಬೆಳವಣಿಗೆಯಾಗಿದ್ದು, 2016-17 ರಲ್ಲಿ ಜಿಡಿಪಿ ಬೆಳವಣಿಗೆ ಶೇ.7.1 ರಷ್ಟಿತ್ತು. ಇದಕ್ಕೂ ಮುನ್ನ 2014-15 ರಲ್ಲಿ ಶೇ.7.5 ರಷ್ಟಿತ್ತು. 2017-18 ರಲ್ಲಿ ಶೇ.6.5 ರಷ್ಟು ಜಿಡಿಪಿ ಬೆಳವಣಿಗೆ ನಿರೀಕ್ಷೆ ಮಾಡಲಾಗುತ್ತಿದ್ದು, ನಾಲ್ಕು ವರ್ಷಗಳಲ್ಲೇ ಕಡಿಮೆ ಎಂದು ಕೇಂದ್ರ ಅಂಕಿ ಅಂಶ ಕಚೇರಿ ಹೇಳಿದೆ.

2017-18 ರ ಜಿವಿಎ 6.6 ರಷ್ಟಿರಲಿದೆ ಎಂಬ ನಿರೀಕ್ಷೆ ಇತ್ತು, ಆದರೆ ಈಗ ಶೇ.6.1 ರಷ್ಟಿರಲಿದೆ ಎಂದು ಅಂದಾಜಿಸಲಾಗುತ್ತಿದೆ, ಇನ್ನು ಕೃಷಿ ಹಾಗೂ ಮೀನುಗಾರಿಕಾ ಚಟುವಟಿಕೆಗಳೂ ಸಹ ಶೇ.4.9 ರಷ್ಟಿಂದ ಶೇ.2.1 ರಷ್ಟಕ್ಕೆ ಇಳಿಕೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Leave a Reply