ಹೊಸದಿಲ್ಲಿ: ಜವಾಹರಲಾಲ್ ನೆಹರೂ ಯುನಿವರ್ಸಿಟಿಯ ಸಂಶೋಧನಾ ವಿದ್ಯಾರ್ಥಿ ಮತ್ತು ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ವಿರುದ್ಧ ನಡೆದ ಹತ್ಯೆ ಯತ್ನದ ತನಿಖೆಯನ್ನು ದಿಲ್ಲಿ ಪೊಲೀಸರು ಸ್ಪೆಶಲ್ ಸೆಲ್‍ಗೆ ವರ್ಗಾಯಿಸಿದೆ.

ಹೊಸದಿಲ್ಲಿ ಕಾನ್‍ಸ್ಟಿಟ್ಯೂಶನ್ ಕ್ಲಬ್‍ನ ಮುಂಭಾಗದಲ್ಲಿ ಉಮರ್ ಕೊಲೆ ಯತ್ನ ನಡೆದಿತ್ತು. ಮರು ದಿವಸವೇ ದಿಲ್ಲಿ ಪೊಲೀಸ್ ಕಮಿಶನರ್ ಅಮೂಲ್ಯ ಪಟ್ನಾಯಕರು ತನಿಖೆಯ ಹೊಣೆಯನ್ನು ಪೊಲೀಸರ ವಿಶೇಷ ತಂಡಕ್ಕೆ ವಹಿಸಿದ್ದಾರೆ. ಈ ಸ್ಪೆಶಲ್ ಸೆಲ್ ವಿರುದ್ಧ ಅನೇಕ ಆರೋಪಗಳು ಈಗಾಗಲೇ ಕೇಳಿ ಬಂದಿವೆ.

ಉಮರ್ ಖಾಲಿದ್‍ರೊಂದಿಗೆ ಜಗ್ಗಾಡಿದಾಗ ಕೋವಿಯ ಟ್ರಿಗರ್ ಜಾಂ ಆಗಿದ್ದಾಗ ದುಷ್ಕರ್ಮಿ ಓಡಿ ರಕ್ಷೆ ಹೊಂದಿದನೆಂದು ಪೊಲೀಸರು ಹೇಳುತ್ತಾರೆ. ಅಜ್ಞಾತ ದುಷ್ಕರ್ಮಿ ಓಡುತ್ತಿರುವುದು ರಿಸರ್ವ್ ಬ್ಯಾಂಕ್‍ನ ಸಿಸಿಟಿವಿಯಲ್ಲಿ ದಾಖಲಾಗಿತ್ತು. ದೃಶ್ಯಗಳು ಪೊಲೀಸರಿಗೆ ಲಭ್ಯವಾಗಿದೆ. ಆದರೆ ದುಷ್ಕರ್ಮಿ ಯಾರೆಂದು ಪೊಲೀಸರಿಗೆ ಈ ವರೆಗೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.

ಭಾರತದಲ್ಲಿ ನಿರ್ಮಾಣವಾದ 7.65ಎಂಎಂ ಪಿಸ್ತೂಲಿನಿಂದ ಉಮರ್‍ಗೆ ದುಷ್ಕರ್ಮಿ ಗುರಿಯಿಟ್ಟಿದ್ದನು. ಕೋವಿಯ ಪರಿಶೀಲನೆಗಾಗಿ ಸೆಂಟ್ರಲ್ ಫಾರೆನ್ಸಿಕ್ ಸಯನ್ಸ್ ಲ್ಯಾಬ್ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಉಮರ್ ಖಾಲಿದ್‍ರ ದೂರಿನಲ್ಲಿ ಕೊಲೆ ಯತ್ನದ ಕೇಸನ್ನು ಪೊಲೀಸರು ದಾಖಲಿಸಿದ್ದಾರೆ.

ಈ ನಡುವೆ ಉಮರ್ ಕೊಲೆ ಯತ್ನ ಒಂದು ನಾಟಕವೆಂದು ಬಿಜೆಪಿ ನಾಯಕರು ಮತ್ತು ಬಿಜೆಪಿಯ ಬೆಂಬಲಿಗ ಮಾಧ್ಯಮಗಳು ಪ್ರಚಾರ ಮಾಡುತ್ತಿವೆ. ಆದರೆ ಈ ಆರೋಪವನ್ನು ದಿಲ್ಲಿ ಪೊಲೀಸರು ನಿರಾಕರಿಸಿದ್ದಾರೆ.

ಉಮರ್ ಖಾಲಿದ್‍ರ ಕೊಲೆ ಯತ್ನ ಮತ್ತು ದುಷ್ಕರ್ಮಿಯೊಂದಿಗೆ ನಡೆದ ನೂಕಾಟಗಳು ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಆದ್ಧರಿಂದ ಘಟನೆಯನ್ನು ನಾಟಕವೆಂದು ಒಪ್ಪಲು ಸಾದ್ಯವಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ಜೆಎನ್‍ಯು ವಿದ್ಯಾರ್ಥಿ ನಾಯಕಿ ಶೆಹ್ಲಾ ರಶೀದ್ ಮತ್ತು ಗೊರಕ್‍ಪುರದ ವೈದ್ಯ ಕಫಿಲ್ ಖಾನ್‍ರಿಗೂ ಕೊಲೆ ಬೆದರಿಕೆ ಬಂದಿದೆ ಎಂದು ವರದಿಯೊಂದು ತಿಳಿಸಿದೆ.

Leave a Reply