“ತನ್ನ ಹಿರಿಯ ಸಹೋದರ ಔರಂಗಜೇಬ್ ಕ್ರಿಕೆಟ್ ಬ್ಯಾಟ್ ಮತ್ತು ಉಡುಗೊರೆಗಳೊಂದಿಗೆ ಈದ್ ಆಚರಿಸಲು ಮನೆಗೆ ಬರುತ್ತಾರೆ ಎಂದು ಕಾಯುತ್ತಿದ್ದರು ಹದಿನೈದು ವರ್ಷದ ತಮ್ಮ ಆಸಿಮ್. ಆದರೆ ದಾರಿ ಮಧ್ಯೆ ಅಣ್ಣ ಔರಂಗಜೇಬನನ್ನು ಕಾಶ್ಮೀರದ ಭಯೋತ್ಪಾದಕರು ಅಪಹರಿಸಿ ಕೊಲ್ಲುತ್ತಾರೆ.

ಆದರೆ ತನ್ನ ಹಿರಿಯ ಸೋದರನ ಸಾವಿನಿಂದ 15 ವರ್ಷದ ಆಸಿಮ್ ಎದೆಗುಂದಲಿಲ್ಲ. ಸೇನೆಯನ್ನು ಸೇರುವ ನಿರ್ಧಾರದಿಂದಲೂ ಆತ ಹಿಂದೆ ಸರಿಯದೆ ಅಪ್ಪ ಮತ್ತು ಅಣ್ಣನಂತೆ ತಾನೂ ಸೇನೆ ಸೇರುತ್ತೇನೆ ಎಂಬ ಸಂದೇಶ ನೀಡಿದ್ದಾರೆ.

ಸಲಾನಿ ಹ್ಯಾಮ್ಲೆಟ್ ನಿವಾಸಿಗಳಿಗೆ ಸೇನೆಗೆ ಸೇರುವುದು ಅವರ ಉಪಜೀವನದ ಮಾರ್ಗವಾಗಿದೆ. ಔರಂಗಜೇಬ್ ಮತ್ತು ಆಸಿಮ್ರ ತಂದೆ ಮೊಹಮ್ಮದ್ ಹನೀಫ್, ಜಮ್ಮು ಮತ್ತು ಕಾಶ್ಮೀರ ಲೈಟ್ ಇನ್ಫ್ಯಾಂಟ್ರಿಯ ಮಾಜಿ ಸಿಪಾಯಿಯಾಗಿದ್ದರು. ಇದೀಗ ತನ್ನ ಮಗನ ಸಾವಿನಿಂದ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದ್ದು, ಭಯೋತ್ಪಾದನೆಯ ವಿವಾದವನ್ನು ಬಗೆಹರಿಸಲು ಸರ್ಕಾರವು ಬಲವಾದ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

44 ವರ್ಷದ ಔರಂಗಝೇಬ್ ರಾಷ್ಟ್ರೀಯ ರೈಫಲ್ಸ್ ಭಾಗವಾಗಿದ್ದರು. ಈದ್ ಆಚರಣೆಗಾಗಿ ಮನೆಯತ್ತ ಮರಳುತ್ತಿದ್ದಾಗ ಪುಲ್ವಾಮ ಜಿಲ್ಲೆಯಲ್ಲಿ ಉಗ್ರರು ಅವರನ್ನು ಅಪಹರಿಸಿ ನಂತರ ಗುಂಡಿಕ್ಕಿ ಸಾಯಿಸಿದ್ದರು. ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಮೀರ್ ಟೈಗರ್ ನನ್ನು ಹತ್ಯೆಗೈದ ಮೇಜರ್ ರೋಹಿತ್ ಶುಕ್ಲಾ ತಂಡದಲ್ಲಿ ಔರಂಗ್‍ಜೇಬ್ ಒಬ್ಬರಾಗಿದ್ದರು.

ತನ್ನ ಮಗನ “ಹತ್ಯೆಯ” ಪ್ರತೀಕಾರ ಪಡೆಯಬೇಕೆಂದು ಔರಂಗ್ ಝೇಬ್ ತಂದೆ ಹನೀಫ್ ಪ್ರಧಾನಿ ನರೇಂದ್ರ ಮೋದಿ ಮತ್ತು ಕಮಾಂಡರ್ಗಳೊಂದಿಗೆ ಆಗ್ರಹಿಸಿದ್ದಾರೆ. ತಮ್ಮ ಆಸಿಮ್ ನೊಂದಿಗೆ ಫೋನಿನಲ್ಲಿ ಮಾತಾಡುತ್ತಿದ್ದಾಗ ಔರಂಗಜೇಬನನ್ನು ಅಪಹರಿಸಲಾಗಿತ್ತು.

Leave a Reply