ತೃಶೂರ್: ಕೇರಳ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಕಮ್ಯುನಿಸ್ಟ್ ಹಿರಿಯ ನಾಯಕ ವಿ.ಎಸ್ ಅಚ್ಯುತಾನಂದನ್ ಶಾಸಕರ ವಿರುದ್ಧ ಕೇಳಿ ಬಂದಿರುವ ಆರೋಪದಲ್ಲಿ ಸಿಪಿಎಂ ಕಠಿಣ ಕ್ರಮಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಶಾಸಕ ಪಿಕೆ ಶಶಿ ಶೋರ್ನೂರ್ ಶಾಸಕರಾಗಿದ್ದು ಅವರ ವಿರುದ್ಧ ಡಿವೈಎಫ್‍ಐ ಮಹಿಳಾ ನಾಯಕಿ ಅತ್ಯಾಚಾರ ಯತ್ನ ಆರೋಪ ಹೊರಿಸಿ ಪಾರ್ಟಿಗೆ ದೂರು ನೀಡಿದ್ದರು.

ಶಾಸಕರ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಮುನ್ಸೂಚನೆಯನ್ನು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ನೀಡಿದ್ದಾರೆ. ಅಚ್ಯುತಾನಂದನ್ ಶಾಸಕರ ವಿರುದ್ಧ ಇರುವ ದೂರು ಮಹಿಳಾ ವಿಷಯವಾದ್ದರಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಮತ್ತು ಪ್ರಕರಣದ ಕುರಿತು ಸಿಪಿಎಂ ಅಧ್ಯಯನ ನಡೆಸಿ ಸರಿಯಾದ ಸಮಯದಲ್ಲಿ ಸೂಕ್ತ ಕ್ರಮಕೈಗೊಳ್ಳಲಿದೆ ಎಂದು ಅವರು ಹೇಳಿದರು.

ಸದ್ರಿ ಶಾಸಕರ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗ ಸ್ವಪ್ರೇರಣೆಯಿಂದ ಕೇಸು ದಾಖಲಿಸಿಕೊಂಡಿದೆ. ಕೇರಳ ಮಹಿಳಾ ಆಯೋಗ ಶಾಸಕರ ವಿರುದ್ಧಸ್ವಪ್ರೇರಣೆಯಿಂದ ಕೇಸುದಾಖಲಿಸಿಕೊಳ್ಳುವಂತಿಲ್ಲ ಎಂದಿತ್ತು. ಈ ಬೆಳವಣಿಗೆಯ ನಂತರ ರಾಷ್ಟ್ರೀಯ ಮಹಿಳಾ ಆಯೋಗ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದೆ. ಕೇರಳ ಮಹಿಳಾ ಆಯೋಗದ ಅಧ್ಯಕ್ಷೆ ಜೊಸೆಫೈನ್ ಮಹಿಳಾ ನಾಯಕಿ ಆಯೋಗಕ್ಕೆ ದೂರು ನೀಡಿದರೆ ಕೇಸು ದಾಖಲಸಿಕೊಳ್ಳಲಾಗುವುದು ಎಂದು ತಿಳಿಸಿದ್ದರು.

Leave a Reply