ಮುಂಬೈಯಲ್ಲಿ ಒಬ್ಬ ವ್ಯಕ್ತಿ ಈಗಷ್ಟೇ ಹುಟ್ಟಿದ ಹಸುಳೆಯ ಜೀವವನ್ನು ಕಾಪಾಡಿದ ಕಾರಣಕ್ಕಾಗಿ ಇಂಟರ್ನೆಟ್ನಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಮುಂಬಯಿ ಯುವಕ ಹಾದುಹೋಗುವಾಗ ಆಟೋವೊಂದರಲ್ಲಿ ತೊರೆದು ಹೋದ ಮಗುವನ್ನು ಕಂಡ ಬಳಿಕ ಸಹಾಯಕ್ಕಾಗಿ ಟ್ವಿಟರ್ ನಲ್ಲಿ ಹಲವಾರು ಪೋಸ್ಟ್ ಮಾಡಿದ್ದರು.
ಶಿಶುವನ್ನು ಬಿಳಿ ಕಂಬಳಿಯಲ್ಲಿ ಸುತ್ತಿಕೊಂಡಿದ್ದರೂ, ಶಿಶು ಶೀತದಿಂದ ನಡುಗುತ್ತಿತ್ತು ಎಂದು ಅವರು ಟ್ವಿಟರ್ ಮೂಲಕ ಹೇಳಿದ್ದರು.

ಅವರ ಈ ಪೋಸ್ಟ್ ಆನ್ಲೈನ್ನಲ್ಲಿ ಬಹಳಷ್ಟು ಪ್ರಭಾವ ಬೀರಿದ್ದು, ಪೋಸ್ಟ್ ನಂತರ ಕೆಲವರು ಆತನನ್ನು ಸಂಪರ್ಕಿಸಿದರು. ಕೆಲವರು ವಿಚಾರಣೆ ನಡೆಸಲು ಸಹಾಯ ಮಾಡಿದರು, ಇತರರು ಹೆಲ್ಪ್ಲೈನ್ ​​ಸಂಖ್ಯೆಗಳನ್ನು ನೀಡಿದರು ಮತ್ತು ಇತರರು ಮಗುವಿನ ಜೀವವನ್ನು ಉಳಿಸಿದ್ದಕ್ಕೆ ಅವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ಇಂಡಿಯನ್ ಎಕ್ಸ್ಪ್ರೆಸ್.ಕಾಂಗೆ ಮಾತನಾಡಿದ ಅವರು, ಅವರ ಹೆಸರು ಹೇಮಂತ್ ಶರ್ಮಾ ಮುಂಬೈಯಲ್ಲಿ ಕಂಜೂರ್ಮಾರ್ಗ್ ಹತ್ತಿರದ ನಿವಾಸಿಯಾಗಿದ್ದು 26 ವರ್ಷ ವಯಸ್ಸಿನ ಅವರು ಮಗುವನ್ನು ದಾದರ್ ಕಾಲೊನಿ ಪ್ರದೇಶದಲ್ಲಿ ತೊರೆದು ಹೋಗಿದ್ದನ್ನು ಕಂಡರು. ಆ ಹಸುಳೆ ಇಬ್ಬರು ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಗಳ ಮೇಲ್ನೋಟದಲ್ಲಿದೆ ಮತ್ತು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಮಗುವಿನ ಪೋಷಕರನ್ನು ಕಂಡುಹಿಡಿಯಲು ಪೊಲೀಸರು ಇನ್ನೂ ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಟ್ವಿಟರ್ಗೆ ಸ್ಪಂದಿಸಿದ ಪೊಲೀಸರೂ ಪ್ರಶಂಸೆಗೆ ಪಾತ್ರರಾಗಿದ್ದಾರೆ.

Leave a Reply