Dipak Das at work in Gopalpur, Cooch Behar. (Express photo by Partha Paul)

ಬಿಜೆಪಿಯ 36ವರ್ಷ ವಯಸ್ಸಿನ ಐಟಿ ಕಾರ್ಯಕರ್ತ 1114 ವಾಟ್ಸ್ಯಾಪ್ ಗ್ರೂಪ್ ಗಳ ಅಡ್ಮಿನ್ ಆಗಿದ್ದಾರೆ ಎಂದರೆ ಆಶ್ಚರ್ಯ ಆಗುತ್ತದೆ. ಕೂಚ್ ಬಿಹಾರ್ ನ (ಪಶ್ಚಿಮ ಬಂಗಾಳ) ಬಿಜೆಪಿ ಯ ಐಟಿ ಸೆಲ್ ನ ಸಂಯೋಜಕ 36 ವರ್ಷದ ದೀಪಕ್ ದಾಸ್ ಗೋಪಾಲ್‌ ಪುರ ಹಳ್ಳಿಯಲ್ಲಿ ಔಷಧಿಯ ಅಂಗಡಿ ನಡೆಸುತ್ತಿರುವ ಜೊತೆ ಐಟಿ ಯಲ್ಲಿ ಸಕ್ರಿಯರಾಗಿದ್ದಾರೆ. 1114 ವಾಟ್ಸ್ಯಾಪ್ ಗ್ರೂಪ್‌ ಗಳ ಅಡ್ಮಿನ್ ಆಗಿ ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ. ದೀಪಕ್ ಒಂದು ನಂಬರ್ ನಿಂದ 229 ಗ್ರೂಪ್ ನ ಅಡ್ಮಿನ್ ಆಗಿದ್ದಾರೆ ಹಾಗೂ ಇನ್ನೊಂದು ನಂಬರ್ ನಿಂದ 885 ಗ್ರೂಪ್ ಇದೆ. ದೀಪಕ್ ರ ಪ್ರಕಾರ ಪಾರ್ಟಿಯ ಅಧ್ಯಕ್ಷ ಅಮಿತ್ ಶಾ ದೀಪಕ್ ರಂತಹ ಕಾರ್ಯಕರ್ತರಿಗೆ ‘ಐಟಿ ಯೋಧ’ ಎಂದು ಕರೆಯುತ್ತಾರೆ.

“ನಾನು ಪಕ್ಷದ ಜಿಲ್ಲಾ ಐಟಿ ಸೆಲ್ ಸಂಚಾಲಕ. ನಾನು ಪಕ್ಷದ ಫೇಸ್ಬುಕ್ ಪುಟವನ್ನು ನಿರ್ವಹಿಸುತ್ತೇನೆ ಮತ್ತು ಟ್ವಿಟರ್ ಟ್ರೆಂಡ್ಗಳನ್ನು ಆಯೋಜಿಸುತ್ತೇನೆ. ಸಾಮಾಜಿಕ ಮಾಧ್ಯಮವು ಮೌನ ಆಯುಧ. ತೃಣಮೂಲ ಕಾಂಗ್ರೆಸ್ ಇರುವಲ್ಲಿ ಮೈದಾನದಲ್ಲಿ ಕೆಲಸ ಮಾಡಲು ಭಯ ಇರುವಲ್ಲಿ ಈ ಮಾಧ್ಯಮದ ಮೂಲಕ ಸುಲಭವಾಗಿ ಜನರನ್ನು ಸಂಪರ್ಕಿಸಬಹುದು “ಎಂದು ದಾಸ್ ಹೇಳುತ್ತಾರೆ.

2 COMMENTS

Leave a Reply