ಮಂದ್‍ಸಾರ್: ಇಲ್ಲಿನ ಸರಕಾರಿ ಕಾಲೇಜಿನ ಅಧ್ಯಾಪಕರನ್ನು ಎಬಿವಿಪಿ ಕಾರ್ಯಕರ್ತರು ದೇಶದ್ರೋಹಿಯೆಂದು ಆಕ್ಷೇಪಿಸಿದ್ದು, ಇದರಿಂದ ನೊಂದ ಅಧ್ಯಾಪಕರು ವಿದ್ಯಾರ್ಥಿಗಳ ಕಾಲು ಹಿಡಿದಿದ್ದಾರೆ. ಪ್ರೊಫೆಸರ್ ದಿನೇಶ್ ಗುಪ್ತಾ ವಿದ್ಯಾರ್ಥಿಗಳ ಕಾಲು ಹಿಡಿದ ಕ್ಷಮೆ ಕೇಳುತ್ತಿರುವ ದೃಶ್ಯ ವೈರಲ್ ಆಗಿದೆ. ಕಾಲೇಜಿನ ನಾಲ್ಕನೆ ಸೆಮಿಸ್ಟರ್ ಪರೀಕ್ಷೆಯ ಪ್ರಕಟಣೆ ತಡವಾಗುತ್ತಿದೆ ಎಂದು ಆರೋಪಿಸಿ ಎಬಿವಿಪಿ ಕಾರ್ಯಕರ್ತರು ಪ್ರಿನ್ಸಿಪಾಲ್ ಕೋಣೆಯ ಹೊರಗೆ ಘೋಷಣೆ ಕೂಗಿದ್ದಾರೆ. ಕಾಲೇಜಿನ ಪ್ರೊಫೆಸರ್ ದಿನೇಶ್ ಗುಪ್ತ ಎಬಿವಿಪಿ ವಿದ್ಯಾರ್ಥಿಗಳೊಡನೆ ಧ್ವನಿ ಸ್ವಲ್ಪ ತಗ್ಗಿಸಬೇಕೆಂದು ಹೇಳಿದರು.

ನಾವು ವಂದೇ ಮಾತರಂ ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗುವುದನ್ನು ಅಧ್ಯಾಪಕರು ತಡೆದಿದ್ದಾರೆ. ಇವರು ದೇಶದ್ರೋಹಿಯಾಗಿದ್ದಾರೆ. ಅಧ್ಯಾಪಕರು ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿ ಘೋಷಣೆ ಕೂಗಿತು. ಇದಕ್ಕೆ ಪ್ರತಿಯೊಬ್ಬ ವಿದ್ಯಾರ್ಥಿಯ ಹಿಂದೆ ಹೋಗಿ ಅಧ್ಯಾಪಕರು ಕಾಲು ಹಿಡಿದು ಕ್ಷಮೆ ಕೇಳ ತೊಡಗಿದರು. ಈ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಘಟನೆಯ ನಂತರ ದಿನೇಶ್ ಗುಪ್ತ ಮೂರು ದಿನಗಳ ರಜೆಗೆ ಅರ್ಜಿ ಸಲ್ಲಿಸಿದ್ದಾರೆ.

ಆದರೆ,ಎಬಿವಿಪಿಯವರನ್ನು ಮಂದಸಾರ್ ಶಾಸಕ ಯಶ್‍ಪಾಲ್ ಸಿಸೊಡಿಯ ಸಮರ್ಥಿಸಿದ್ದಾರೆ. ಘಟನೆ ದೊಡ್ಡ ವಿಷಯವಲ್, ಕಾಲು ಹಿಡಿಯಲು ಅಥವಾ ಕ್ಷಮೆ ಕೇಳಲು ಎಬಿವಿಪಿ ವಿದ್ಯಾರ್ಥಿಗಳು ಅವರಲ್ಲಿ ಹೇಳಿಲ್ಲ ಎಂದು ಶಾಸಕರು ಸ್ಪಷ್ಟನೆ ನೀಡಿದ್ದಾರೆ.

Leave a Reply