2016ರಲ್ಲಿ ಭಾರತದಲ್ಲಿ ಸರಕಾರಿ ಬ್ಯಾಂಕುಗಳು 615 ಖಾತೆಗಳ ಮೂಲಕ 58,561 ಕೋಟಿರೂಪಾಯಿ ರೈತಸಾಲ ನೀಡಿದ್ದು ದ ವಯರ್ ಸಲ್ಲಿಸಿದ ಮಾಹಿತಿ ಹಕ್ಕು ಅರ್ಜಿಯಲ್ಲಿ ರಿಸರ್ವ್ ಬ್ಯಾಂಕ್ ವಿವರ ನೀಡಿದೆ ರೈತರ ಸಾಲ ವಿಭಾಗಗಳಲ್ಲಿ ಪ್ರತಿಯೊಂದು ಬ್ಯಾಂಕುಗಳಿಗೆ ಕನಿಷ್ಠ 95 ಕೋಟಿ ರೂಪಾಯಿ ಸಾಲ ನೀಡಲು ಅನುಮತಿಸಲಾಗಿತ್ತು.

ದೇಶದಲ್ಲಿ ಆರ್ಥಿಕ ಕ್ಷೇತ್ರದ ಉನ್ನತಿಗಾಗಿ ಕೃಷಿ ಸಣ್ಣೋದ್ಯಮ, ಶಿಕ್ಷಣ, ವಸತಿ,ಇಂಧನ ಕ್ಷೇತ್ರಗಳಿಗೆ ಶೇ.4ರ ಬಡ್ಡಿದರ ಸಾಲದಲ್ಲಿ ಒಂದು ನಿಶ್ಚಿತ ಮೊತ್ತ ಸಾಲವನ್ನು ನೀಡಬೇಕೆಂದು ರಿಸರ್ವ್ ಬ್ಯಾಂಕ್‍ನ ಆದೇಶವಿದೆ. ಒಟ್ಟು ಸಾಲಗಳ ಮೊತ್ತದಲ್ಲಿ ಬ್ಯಾಂಕುಗಳು ಶೇ. 18ರಷ್ಟು ರೈತ ವಿಭಾಗದಲ್ಲಿ ಸಾಲ ನೀಡಬೇಕಾಗುತ್ತದೆ. ಆದರೆ,ರೈತರ ಸಾಲ ಬಹುದೊಡ್ಡ ಶೇಕಡವಾರು ಲೆಕ್ಕದಲ್ಲಿ ಬ್ಯಾಂಕುಗಳು ಕಾರ್ಪೊರೇಟ್ ಕಂಪೆನಿಗಳಿಗೆ ನೀಡಿ ವಂಚನೆಯೆಸಗಿವೆ. ಹೀಗಾದುದರಿಂದ ಬಡರೈತರಿಗೆ ಸಾಲ ಸಿಗುವುದಿಲ್ಲ ಎಂದು ರಿತು ಸ್ವರಾಜ್ಯ ವೇದಿಕೆ ಯ ಸಂಸ್ಥಾಪಕ ಕಿರಣ್ ಕುಮಾರ್ ಹೇಳಿದರು.

ರೈತ ಸಾಲದ ಲಾಭವೆಂದರೆ ಸಾಧಾರಣವಾಗಿ ಈ ಸಾಲದಲ್ಲಿ ಕಡಿಮೆ ಬಡ್ಡಿಯಿದೆ ಎನ್ನುವುದು ವಿಶೇಷತೆಯಾಗಿದೆ. ಇತರ ಲೋನ್ ಪಡೆಯುವಾಗ ಇರುವ ನಿಯಮಗಳು ರೈತ ಲೋನ್‍ಗಿಲ್ಲ. ಸಣ್ಣ ರೈತರು, ಕೆಳವರ್ಗದವರಿಗೆ ಸಾಲ ಸಿಗುವಂತಾಗಲು ನಿಯಮ ನಿಬಂಧನೆಗಳ ಸಡಿಲಿಕೆ ಮಾಡಲಾಗುತ್ತದೆ. ರೈತಸಾಲಕ್ಕೆ ಶೇ.4ರಷ್ಟು ಬಡ್ಡಿಯಿರುತ್ತದೆ.
ಕೃಷಿಯುದ್ಯಮದಲ್ಲಿ ತೊಡಗಿಸಿಕೊಂಡಿರುವ ದೊಡ್ಡ ಕಂಪೆನಿಗಳು ರೈತ ವಿಭಾಗದಲ್ಲಿ ಸಾಲ ಪಡೆಯುತ್ತಿವೆ. ರಿಲಯನ್ಸ್ ಫ್ರೆಶ್ ಕಂಪೆನಿಯಂತವುಗಳು ಈ ವಿಭಾಗದಲ್ಲಿ ಬರುತ್ತದೆ. ಇಂತಹ ಕಂಪೆನಿಗಲು ಕೃಷಿಯುತ್ಪನ್ನಗಳನ್ನು ಖರೀದಿಸಿ ಮಾರುತ್ತಿವೆ. ಇದಕ್ಕಾಗಿ ಮತ್ತು ಗೋದಾಮುಗಳು ಇತ್ಯಾದಿಗಳಿಗಾಗಿ ಬ್ಯಾಂಕಿನಿಂದ ರೈತ ಸಾಲ ಪಡೆಯುತ್ತಿವೆ ಎಂದು ಕಿರಣ್‍ಕುಮಾರ್ ವಿಝ್ಝ ಹೇಳುತ್ತಿದ್ದಾರೆ.

Leave a Reply