ಆಲಿಗಢ : ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯ ದೇಶದ ಅತ್ಯುತ್ತಮ ವಿಶ್ವವಿದ್ಯಾನಿಲಯಗಳಲ್ಲಿ ಒಂದು ಎಂದು ಇಂಡಿಯಾ ಟುಡೆ ಮುದ್ರಾ ಸಮೀಕ್ಷೆ ಹೇಳಿದೆ.

ಭಾರತದ ಸರಕಾರಿ ವಿಶ್ವವಿದ್ಯಾನಿಲಯಗಳಲ್ಲಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯಕ್ಕೆ ಸಮೀಕ್ಷೆ 5ನೇ ಸ್ಥಾನ ನೀಡಿದೆ.

‘‘ಭಾರತದ ಅತ್ಯುತ್ತಮ ಸರಕಾರಿ ವಿಶ್ವವಿದ್ಯಾನಿಲಯಗಳಲ್ಲಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯ ಈ ಸ್ಥಾನ ಪಡೆದುಕೊಂಡಿರುವುದು ಹೆಮ್ಮೆಯ ವಿಚಾರ’’ ಎಂದು ಹೇಳಿರುವ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ ಉಪ ಕುಲಪತಿ ಹಾಗೂ ಅಧ್ಯಾಪಕ ತಾರಿಕ್ ಮನ್ಸೂರ್ ವಿಶ್ವವಿದ್ಯಾನಿಲಯದ ಭೋದಕ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸಂಶೋಧಕರನ್ನು ಅಭಿನಂದಿಸಿದ್ದಾರೆ.

ವಿಶ್ವವಿದ್ಯಾನಿಲಯ ಉತ್ತಮ ಸಂಶೋಧನೆ, ಗುಣ ಮಟ್ಟದ ಪ್ರಕಟನೆ , ಐಪಿಆರ್ ಹಾಗೂ ಪೇಟೆಂಟ್‌ಗಳನ್ನು ಉತ್ಪಾದಿಸುತ್ತದೆ ಎಂಬುದನ್ನು ವಿಶ್ವವಿದ್ಯಾನಿಲಯಕ್ಕೆ ದೊರಕಿತ ಸ್ಥಾನ ಸಾಬೀತು ಪಡಿಸಿದೆ ಎಂದು ಅವರು ಹೇಳಿದ್ದಾರೆ.

Leave a Reply