ಸಾಂದರ್ಭಿಕ ಚಿತ್ರ

ದೋಹ: ಒಂದು ಮಿಲಿಯನ್ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ನೆರವು ನೀಡಲು ಕತರ್ ಮುಂದೆ ಬಂದಿದೆ. 2021ಕ್ಕಾಗುವಾಗ ಈ ಯೋಜನೆಯನ್ನು ಪೂರ್ತಿಗೊಳಿಸಲು ಕತರ್ ಬದ್ಧವಾಗಿದೆ ಎಂದು ವಿಶ್ವಸಂಸ್ಥೆಯ 73ನೇ ವಾರ್ಷಿಕ ಸಮ್ಮೇಳನದಲ್ಲಿ ಕತರ್ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್‍ತಾನಿ ಘೋಷಿಸಿದರು.

ಆಂತರಿಕ ಘರ್ಷಣೆಯಲ್ಲಿ ಮತ್ತು ಆರ್ಥಿಕ ವಿಷಯಗಳಲ್ಲಿ ಹಿಂದುಳಿದಿರುವ ದೇಶಗಳ ಮಕ್ಕಳಿಗೆ ಶಿಕ್ಷಣ ನೆರವು ನೀಡಲಾಗುವುದು. ವಿಶ್ವಸಂಸ್ಥೆಯಲ್ಲಿ ನಾಯಕರ ಸಮ್ಮೇಳನದಲ್ಲಿ ಕತರ್ ಅಮೀರ್ ಕತರ್ ಕೈಗೊಂಡಿರುವ ಪ್ರಧಾನ ನಿರ್ಧಾರವನ್ನು ಪ್ರಕಟಿಸಿದರು.

ಅಭಿವೃದ್ಧಿ ಶೀಲ ದೇಶಗಳ ಮಹಿಳಾ ವಿದ್ಯಾಭ್ಯಾಸ ವಿಷಯದಲ್ಲಿ ನಡೆದ ದುಂಡು ಮೇಜಿನ ಚರ್ಚೆಯಲ್ಲಿ ಅಮೀರ್ ಕತರ್‍ನ ನಿರ್ಧಾರವನ್ನು ಘೋಷಿಸಿದರು. ಶಿಕ್ಷಣ ಚಟುವಟಿಕೆಗಳಿಗೆ ವಿಶೇಷವಾಗಿ ಮಹಿಳಾ ಶಿಕ್ಷಣವನ್ನು ಕತರ್ ಯಾವತ್ತೂ ಗಂಭೀರವಾಗಿ ಪರಿಗಣಿಸುತ್ತಾ ಬಂದಿದೆ ಎಂದರು.

ಆಂತರಿಕ ಸಂಘರ್ಷ ನಡೆಯುವ ದೇಶಗಳು ಮತ್ತು ಪ್ರಾಕೃತಿಕ ದುರಂತಗಳ ವಿರುದ್ಧ ಪ್ರದೇಶಗಳಲ್ಲಿ ಲಕ್ಷಾಂತರ ಮಕ್ಕಳು ಶಿಕ್ಷಣ ಲಭಿಸದೆ ಕಷ್ಟ ಅನುಭವಿಸುತ್ತಿದ್ದಾರೆ. ಈ ವಿಷಯದಲ್ಲಿ ಕತರ್ ಜಾರಿಗೆ ತರುತ್ತಿರುವ ಯೋಜನೆಗಳನ್ನು ಅಮೀರ್ ಅಭಿಮಾನದಿಂದ ಸ್ಮರಿಸಿಕೊಂಡಿದ್ದಾರೆ.

ಐವತ್ತು ದೇಶಗಳ 1.8 ಕೋಟಿ ಮಕ್ಕಳಿಗೆ ವಿವಿಧ ಏಜೆನ್ಸಿಗಳ ಮೂಲಕ ಸಹಕರಿಸ ಕತರ್ ಶಿಕ್ಷಣ ಸಹಾಯ ನೀಡುತ್ತಿದೆ. 2021ಕ್ಕಾಗುವಾಗ ಒಂದು ಮಿಲಿಯನ್ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಲು ತನ್ನ ಸರಕಾರ ಪ್ರತಿಜ್ಞಾ ಬದ್ಧವಾಗಿದೆ ಎಂದು ಅಮೀರ್ ಹೇಳಿದರು. ಹೆಣ್ಣು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹೇಗೆ ಲಭ್ಯಗೊಳಿಸಬಹುದು ಎನ್ನುವ ವಿಷಯದಲ್ಲಿ ಹೆಚ್ಚಿನ ಚರ್ಚೆ ನಡೆಯಿತು. ವಿವಿಧ ದೇಶಗಳ ಪ್ರತಿನಿಧಿಗಳು ಚರ್ಚೆಯಲ್ಲಿ ಭಾಗವಹಿಸಿ ಮಾತಾಡಿದರು.

Leave a Reply