ಪುದುಚೇರಿ: ಮಹಾತ್ಮಾಗಾಂಧಿ 150ನೆ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಪುದುಚೇರಿ ಲೆಫ್ಟಿನೆಂಟ್ ಗವರ್ನರ್(ಉಪರಾಜ್ಯಪಾಲೆ) ಕಿರಣ್ ಬೇಡಿ ಮತ್ತು ಎಐಡಿಎಂಕೆ ಶಾಸಕ ಎ.ಅಂಬಲಗನ್ ನಡುವೆ ವೇದಿಕೆಯಲ್ಲಿ ಮಾತಿನ ಚಕಮಕಿ ನಡೆದಿದೆ. ಶಾಸಕರ ಭಾಷಣದ ನಂತರ ಕಿರಣ್ ಬೇಡಿ ಅವರನ್ನುತರಾಟೆಗೆತ್ತಿಕೊಂಡಿದ್ದರು. ನಂತರ ಶಾಸಕರುಕೂಡ ವಾಗ್ವಾದಕ್ಕಿಳಿದರು. ಈ ಹೈಪ್ರೋಫೈಲ್ ಡ್ರಾಮ ಕ್ಯಾಮರಾದಲ್ಲಿ ದಾಖಲಾಗಿದ್ದು ತೀವ್ರಗತಿಯಲ್ಲಿ ವೈರಲ್ ಆಗಿದೆ.

ವರದಿಯಾಗಿರುವ ಪ್ರಕಾರ ಅಂಬಲಗನ್ ವೇದಿಯಲ್ಲಿ ಸರಕಾರವನ್ನುಟೀಕಿಸಿದ್ದರು. ಆಗ ಅವರ ಧ್ವನಿವರ್ಧಕ ಬಂದ್ ಆಗಿತು. ಕಿರಣ್ ಬೇಡಿಯಿಂದಾಗಿ ಮೈಕ್ ಬಂದ್ ಆಗಿದೆ ಎಂದು ಶಾಸಕರು ಆರೋಪಿಸಿದರು. ಈ ವಿಷಯದಲ್ಲಿ ಇಬ್ಬರ ನಡುವೆ ಮಾತಿನ ಜಗಳ ನಡೆದಿದೆ. ಶಾಸಕರು ಕಾರ್ಯಕ್ರಮವನ್ನೇ ಬಹಿಷ್ಕರಿಸಿದರು. ವೀಡಿಯೊದಲ್ಲಿ ಚಕಮಕಿಗಿಳಿದಿರುವ ಶಾಸಕರನ್ನು ಕಿರಣ್ ಬೇಡಿ ಅಲ್ಲಿಂದ ಹೊರಟು ಹೋಗುವಂತೆ ಹೇಳುತ್ತಿರುವುದುಕಂಡು ಬಂದಿದೆ. ಅಲ್ಲಿದ್ದ ಹಲವರು ಚಪ್ಪಾಳೆಯನ್ನೂ ತಟ್ಟಿದರೆನ್ನಲಾಗಿದೆ.

ನಂತರ ಕಿರಣ್ ಬೇಡಿ ಶಾಸಕರ ಧ್ವನಿವರ್ಧಕವನ್ನು ಬಂದ್ ಮಾಡಿದ್ದಕ್ಕೆ ಟ್ವೀಟ್ ಮಾಡಿ ಹೀಗೆ ತಿಳಿಸಿದ್ದಾರೆ. ಒಬ್ಬ ಶಾಸಕರು ಸನ್ಮಾನ್ಯ ಸಚಿವರ ಉಪಸ್ಥಿತಿಯಲ್ಲಿ ತಮ್ಮ ಭಾಷಣವನ್ನು ಸಂಕ್ಷಿಪ್ತಗೊಳಿಸಲು ಹೇಳಿದರೂ ಲೆಕ್ಕಿಸದ್ದರಿಂದ ಅವರ ಧ್ವನಿವರ್ಧಕವನ್ನು ಬಂದ್ ಮಾಡಲಾಯಿತು ಎಂದು ಹೇಳಿದ್ದಾರೆ. ಎಷ್ಟು ಹೇಳಿದರೂ ಶಾಸಕರು ಮಾತು ನಿಲ್ಲಿಸಲಿಲ್ಲ. ಬಯಲು ಶೌಚಮುಕ್ತಗೊಳಿಸುವ ನಿಟ್ಟಿನಲ್ಲಿ ಉತ್ತಮ ಕೆಲಸವನ್ನು ಮಾಡಿದವರನ್ನು ಗೌರವಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದು ಬೇಡಿ ತಿಳಿಸಿದ್ದಾರೆ.

Leave a Reply