ನವದೆಹಲಿ: ಸಾರ್ವಜನಿಕರ ನಡುವೆಯೇ ವೇದಿಕೆಯಲ್ಲಿ ಕಾರ್ಯಕರ್ತನೊಬ್ಬ ಬಿಜೆಪಿಯ ಸಂಸದರೋರ್ವರ ಕಾಲು ತೊಳೆದು ನೀರು ಕುಡಿದ ಘಟನೆ ವಿವಾದವಾಗಿದೆ. ಜಾರ್ಖಂಡ್ ನ ಗೋಡ್ಡದ ಸಂಸದ ನಿಶ್ ಲಾಂತ್ ದುಬೆಯವರ ಕಾಲನ್ನು ಬಿಜೆಪಿ ಕಾರ್ಯಕರ್ತನೊಬ್ಬ ವೇದಿಕೆಯಲ್ಲಿಯೇ ತೊಳೆದ ದೃಶ್ಯ ದುಬೆಯ ಫೇಸ್ ಬುಕ್ ಖಾತೆಯಲ್ಲಿ ಪ್ರಸಾರವಾದದ್ದು ವಿವಾದವಾಗಿದೆ.

ಸಂಸದರ ನಿಧಿಯಿಂದ ತನ್ನ ಕ್ಷೇತ್ರದಲ್ಲಿ ಎರಡು ಗ್ರಾಮಗಳು ಜೊತೆಯಾಗಿಸುವ ಸೇತುವೆ ನಿರ್ಮಾಣದ ಯೋಜನೆಯ ಘೋಷಣಾ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ.


ಜಾರ್ಖಂಡ್ ನಿವಾಸಿ ಯಾದ ಈ ಕಾರ್ಯಕರ್ತ ಸಂಸದರ ಕಾಲು ತೊಳೆದು ನೀರು ಕುಡಿದಿದ್ದ. ಅವರನ್ನು ತಡೆಯುವುದು ಬಿಟ್ಟು ಸಂಸದರು ಅದನ್ನು ಫೇಸ್ ಬುಕ್ ಖಾತೆಯಲ್ಲಿ ಪ್ರಸಾರ ಮಾಡಿದ್ದು ಹೆಚ್ಚು ಟೀಕೆಗೊಳಗಾಗಿದೆ.

ಇದರಲ್ಲಿ ತಪ್ಪೇನಿದೆ, ಯಾರಾದರೂ ನಿಮ್ಮ ಪಾದಪೂಜೆ ನಡೆಸಿ ನೀರು ಸೇವಿಸಲು ಬಯಸಿದರೆ ತಪ್ಪೇನೂ ಇಲ್ಲ. ಇದಕ್ಕೆ ರಾಜಕೀಯ ಬಣ್ಣ ಹಚ್ಚುವ ಅಗತ್ಯವಿಲ್ಲ. ಅತಿಥಿಗಳ ಪಾದಪೂಜೆಯನ್ನು ನಡೆಸಿದರೆ ಅದರಲ್ಲಿ ತಪ್ಪೇನಿದೆ? ನೀವು ಬೇಕಿದ್ದರೆ ಮಹಾಭಾರತದಲ್ಲಿನ ಕಥೆಗಳನ್ನು ಓದಿ ಎಂದು ಬಿಜೆಪಿ ಸಂಸದ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ. ಪಾದಪೂಜೆಯ ಮಹತ್ವದ ಬಗ್ಗೆ ಟೀಕಾಕಾರಲ್ಲಿ ಅಜ್ಞಾನ ಇದೆ ಎಂದು ದುಬೆ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

Leave a Reply