ಭೋಪಾಲ್: ಚುನಾವಣೆನಿಕಟವಾಗಿರುವ ಮಧ್ಯಪ್ರದೇಶದಲ್ಲಿ ಆಡಳಿತ ಹಿಡಿಯಲು ಕಾಂಗ್ರೆಸ್ ಪ್ರಯತ್ನ ಆರಂಭಿಸಿದೆ. ಬಿಜೆಪಿಯವರಂತೆ ಮಂದಿರ ಸಂದರ್ಶನಕ್ಕೆ ಆದ್ಯತೆ ನೀಡಿದ ಕಾಂಗ್ರೆಸ್ ನಾಯಕರು ಈಗ ಗೋ ಸಂರಕ್ಷಣೆಯ ಹೊಣೆಯನ್ನು ಕೂಡ ಎತ್ತಿಕೊಂಡಿದ್ದಾರೆ. ಗೋ ಸಂರಕ್ಷಣೆಯು ಕಾಂಗ್ರೆಸ್‍ನ ಚುನಾವಣಾ ಪ್ರಣಾಳಿಕೆಯಲ್ಲಿಯೂ ಜಾಗ ಪಡೆದಿದ್ದು ಮಧ್ಯಪ್ರದೇಶದಲ್ಲಿ ನಿರಂತರ ಮೂರು ಬಾರಿ ಬಿಜೆಪಿ ಗೆದ್ದಿದೆ.

ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಯ ಹೊಣೆಗಾರಿಕೆಹೊಂದಿರುವ ಕಾಂಗ್ರೆಸ್ ಹಿರಿಯ ನಾಯಕ ಕಮಲ್‍ನಾಥ್ ಗಾಂಜ್‍ಬೋಡಿಯಲ್ಲಿ ನಡೆದ ರ್ಯಾಲಿಯಲ್ಲಿ ದನಗಳ ಅವಸ್ಥೆಯ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ಗೋವುಗಳ ಕುರಿತು ಬಿಜೆಪಿ ಯಾವಾಗಲೂ ಹೇಳುತ್ತದೆ. ಆದರೆ ಅವುಗಳಿಗಾಗಿ ಏನೂ ಮಾಡುವುದಿಲ್ಲ ಎಂದು ಕಮಲ್‍ನಾಥ ಆರೋಪಿಸಿದರು. ಅಧಿಕಾರಕ್ಕೆ ಬಂದರೆ ಎಲ್ಲ ಗ್ರಾಮ ಪಂಚಾಯತ್‍ಗಳಲ್ಲಿ ಗೋಶಾಲೆ ತೆರೆಯಲಿದೆ ಎಂದು ಕಮಲ್ ನಾಥ್ ಹೇಳಿದರು.

ಗೋಮಾತೆಯನ್ನು ಕಾಂಗ್ರೆಸ್ ಈಗಲಾದರೂ ಸ್ಮರಿಸಿತಲ್ಲ ಎಂದು ಬಿಜೆಪಿ ವಕ್ತಾರ ಡಾ. ಹಿತೇಶ್ ಬಾಜ್‍ಪಾಯ್ ಹೇಳಿದರು. ಕಾಂಗ್ರೆಸ್ಸಿಗರು ಬೀಫ್ ಪಾರ್ಟಿ ಆಯೋಜಿಸಿದವರು. ಅವರಿಗೆ ದನಗಳ ಸಾಮಾಜಿಕ-ಆರ್ಥಿಕ ಪ್ರಾಮುಖ್ಯತೆ ಗೊತ್ತಿಲ್ಲ ಎಂದು ಹಿತೇಶ್ ಆರೋಪಿಸಿದರು.

Leave a Reply