ಕ್ಯಾರೆಟ್‍ನ ಕುರಿತು ತಿಳಿಯದವರು, ಅದರ ರುಚಿ ತಿಳಿಯದವರೂ ಇರಲಿಕ್ಕಿಲ್ಲ. ಆದರೆ ಅದರ ಹುಟ್ಟು ಹಾಗೂ ಗುಣ, ಉಪಯೋಗಗಳ ಕುರಿತು ತಿಳಿದುಕೊಂಡಿರುವವರು ತುಂಬಾ ವಿರಳ. ಗೆಡ್ಡೆಯ ವಿಭಾಗಗಳಲ್ಲಿ ಅತ್ಯಂತ ಗುಣಗಳಿರುವ ಔಷಧೀಯ ಗುಣವಿರುವವುಗಳಲ್ಲಿ ಕ್ಯಾರೆಟ್ ಮುಖ್ಯವಾದುದು.

ಮಾರ್ಕೆಟ್‍ನಿಂದ ಖರೀದಿಸಿದ ತಕ್ಷಣ ತೊಳೆಯದೆ ಉಪಯೋಗಿಸುವುದು ಅನಾರೋಗ್ಯಕ್ಕೆ ಹಾದಿ ಮಾಡಿಕೊಡುತ್ತದೆ. ತೊಳೆದು, ಶುದ್ಧಿ ಮಾಡಿ, ಸಿಪ್ಪೆ ಸುಲಿದು ಉಪಯೋಗಿಸಬೇಕು. ಒಂದು ಮೀಟರ್‍ನ ವರೆಗೆ ಎತ್ತರದಲ್ಲಿ ಬೆಳೆಯುವ ಈ ಸಸಿ ಕಾಂಡ ಮತ್ತು ಎಲೆಯನ್ನೂ ಉಪಯೋಗಿಸ ಬಹುದು. ವಿಶ್ವದಲ್ಲಿ ಬೆಳೆಯುವ ಕ್ಯಾರೆಟ್‍ಗಳಲ್ಲಿ ಅರ್ಧಕ್ಕಿಂತ ಹೆಚ್ಚು ಚೈನಾದಲ್ಲಿ ಉತ್ಪಾದಿಸಲಾಗುತ್ತಿದೆ. ಕ್ಯಾರೆಟ್ ಹಲವು ಸ್ಥಳಗಳಲ್ಲಿ ಹಳದಿ ಮೂಲಂಗಿ ಎಂದು ಗುರುತಿಸಲ್ಪಡುತ್ತದೆ.

ಕ್ಯಾರೆಟ್ ಮತ್ತು ಮೂಲಂಗಿ ನೋಡಲು ಒಂದೇ ರೀತಿಯಲ್ಲಿ ದ್ದರೂ ಅದರ ರುಚಿ ಮತ್ತು ಗುಣಗಳಲ್ಲಿ ಬಹಳ ಅಂತರವಿದೆ. ಇವೆರಡರಲ್ಲಿ ಕ್ಯಾರೆಟ್‍ಗೆ ಪ್ರಥಮ ಸ್ಥಾನ ಲಭಿಸುತ್ತದೆ.

ಕಾರ್ಬೋಹೈಡ್ರಟ್, ಸಕ್ಕರೆ, ಫೈಬರ್ ಫೆಟ್,ಪ್ರೊಟೀನ್ ವಿಟಮಿನ್ ಎ, ಬಿ, ಸಿ, ಇ, ಕ್ಯಾಲ್ಸಿಯಮ್, ಕಬ್ಬಿಣ, ಮೆಗ್ನೀಷ್ಯಂ, ಫೆÇೀಸ್‍ಫರಸ್, ಪೊಟಾಷಿಯಂ, ಸೋಡಿಯಂ ಮೊದಲಾದವು ಧಾರಾಳವಾಗಿ ಕ್ಯಾರೆಟ್‍ನಲ್ಲಿವೆ. ಆದ್ದ ರಿಂದಲೇ ಕ್ಯಾರೆಟ್‍ನಂತೆ ಮತ್ತೊಂದಿಲ್ಲ ಎಂದು ಹೇಳಬಹುದು. ಕ್ಯಾರೆಟ್ ಪಚನ ಕ್ರಿಯೆಗೆ, ರಕ್ತ ಶುದ್ಧಿಗೆ ಹಾಗೂ ರಕ್ತದ ಹೆಚ್ಚಳಕ್ಕೂ ಸಹಕಾರಿ ಯಾಗುತ್ತದೆ. ಇದರಲ್ಲಿ ಮಲಬದ್ಧತೆ ಯನ್ನು ಕ್ರಮಗತ ಗೊಳಿಸುವ ಸಾಮರ್ಥ್ಯ ಇದೆ.

ಮೂತ್ರಕ್ಕೆ ಸಂಬಂಧಿಸಿದ ರೋಗ ಗಳು, ಮೂಲವ್ಯಾಧಿ ನೋವು, ಅನ್ನನಾಳದ ಹುಣ್ಣುಗಳು, ಮಧು ಮೇಹ ರೋಗಗಳಿಗೆ ವಿವಿಧ ರೀತಿ ಯಲ್ಲಿ ಉಪಯೋಗಿಸಬಹುದು.
ಕ್ಯಾರೆಟ್ ಮತ್ತು ಕೆಂಪು ಈರುಳ್ಳಿ ಸೇರಿಸಿ ಬೇಯಿಸಿ ತಿನ್ನುವುದು. ಕ್ಯಾರೆಟ್ ಮತ್ತು ಸುವರ್ಣಗಡ್ಡೆ ಯೊಂದಿಗೆ ಸೇವಿಸುವುದು ಮೂಲ ವ್ಯಾಧಿಗೆ ಒಳ್ಳೆಯದು. ಕ್ಯಾರೆಟನ್ನು ಅರೆದು ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಮೊಡವೆ ಹಾಗೂ ಮುಖದ ಕಪ್ಪÅ ಕಲೆಗಳನ್ನು ಮಾಯಗೊಳಿಸುತ್ತದೆ.
ಇದರಿಂದ ಹಲವಾರು ರೀತಿಯ ಖಾದ್ಯಗಳನ್ನು ತಯಾರಿಸಬಹುದು. ಹಲವಾರು ವೈಶಿಷ್ಟ್ಯಗಳಿಂದ ಕೂಡಿದ ಕ್ಯಾರೆಟ್ ನಮ್ಮ ಅಡುಗೆ ಮನೆಯಲ್ಲಿ ಸದಾ ಇರುವಂತೆ ನೋಡಿಕೊಳ್ಳಬೇಕು.

ಕ್ಯಾರೆಟ್‍ನ್ನು ಅತ್ಯಂತ ಜಾಗರೂ ಕತೆಯಿಂದ ಕೃಷಿ ಮಾಡಬೇಕು. ನಿಶ್ಚಿತ ಬಿಸಿಲು ಇದಕ್ಕೆ ಅಗಿಯುವಾಗ ಕಲ್ಲುಗಳಿರುವ ಸ್ಥಳಗಳಲ್ಲಿ ಒಣ ಮಣ್ಣಿನಲ್ಲಿ ಇದರ ಕೃಷಿ ಸಾಧ್ಯವಿಲ್ಲ. ಅಗತ್ಯವಿರುವಷ್ಟು ನೆರಳು, ತಂಪು. ಇದರ ಸಿಪ್ಪೆ ತೆಳುವಾಗಿರುವುದರಿಂದ ಅದಕ್ಕೆ ತಾಗಿದರೆ ಹಾಳಾಗುವ ಸಾಧ್ಯತೆಯಿರುತ್ತದೆ. ಅದನ್ನು ಕೀಳುವಾಗ ಜಾಗ್ರತೆ ವಹಿಸಬೇಕು.

ಡಾ| ಮುಹಮ್ಮದ್ ಬಿನ್ ಅಹ್ಮದ್

Leave a Reply