ಕರಾವಳಿಯ ರೋಮಾಂಚನಕಾರಿ ಪ್ರದೇಶಗಳು ಮೈ ಮನ ಸೆಳೆಯುತ್ತವೆ. ಹೀಗೆ ಧಾರ್ಮಿಕ ಸ್ಥಳಗಳಿಗೆ ಪ್ರಸಿದ್ದಿಯಾದ ಉಡುಪಿ ಸುತ್ತಮುತ್ತಲಿನ ಕರಾವಳಿ ಪ್ರದೇಶಗಳಿಗೆ ಹೆಚ್ಚು ಹೆಚ್ಚು ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಿಂದ ಉಡುಪಿಯಲ್ಲಿ ಹೆಲಿ ಟೂರಿಸಂ ಶುರುವಾಗಿದೆ.

2500 ರೂ ಕೊಟ್ಟರೆ ಆರು ಹಾಗು ಎಂಟು ನಿಮಿಷದ ಎರಡು ಪ್ಯಾಕೇಜ್ ಮೂಲಕ ಉಡುಪಿ ಸುತ್ತಮುತ್ತಲಿನ ಅಂದವಾದ ಪರಿಸರವನ್ನು ವಿಮಾನದಲ್ಲಿ ಸವಿಯಬಹುದು. ಹೊಸ ವರ್ಷದ ಮಜಾ ಅನುಭವಿಸಲು ಇದು ಒಳ್ಳೆಯ ಅವಕಾಶ.

ಇನ್ನು 10 ದಿನಗಳ ಕಾಲ ಹೆಲಿಕಾಪ್ಟರ್ ಸೇವೆ ಇದ್ದು ಸಾಲು ಸಾಲು ರಜಾದಿನಗಳು ಇರುವ ಕಾರಣ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಹಾರುವ ಲೋಹದ ಹಕ್ಕಿಯ ಜೊತೆ ನದಿ , ಸಮುದ್ರ ಎತ್ತರದ ಕಟ್ಟಡಗಳು ,ಪ್ರಕೃತಿ ಸೌಂದರ್ಯ ಸವಿಯಬಹುದು.

Leave a Reply