ನವದೆಹಲಿ : ಹಿಂದುತ್ವ ಎಂದರೆ ಅದು ಭಾರತೀಯತ್ವ ಮತ್ತು ಎಲ್ಲರನ್ನೂ ಒಳಗೊಳ್ಳುವಿಕೆ, ಆದ್ದರಿಂದ ಮುಸ್ಲಿಮರನ್ನು ಸ್ವೀಕರಿಸದ ಹಿಂದುತ್ವಕ್ಕೆ ಅರ್ಥವೇ ಇಲ್ಲ ಎಂದು ಆರೆಸ್ಸೆಸ್ ಮುಖ್ಯಸ್ಥರಾದ ಮೋಹನ್ ಭಗವತ್ ವಿಶ್ಲೇಷಣೆ ನೀಡಿದ್ದಾರೆ.

ದೆಹಲಿಯಲ್ಲಿ ನಡೆಯುವ ಸಂಘದ ಮೂರು ದಿನಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಸನಾತನ ಸಂಸ್ಕೃತಿಯ ಭಾರತದಲ್ಲಿ ಸೌಹಾರ್ದತೆಯ ಬದುಕು ಹಾಸು ಹೊಕ್ಕಾಗಿದೆ. ಬಲಿಷ್ಠ ಭಾರತದ ಕಲ್ಪನೆ ಈಡೇರಬೇಕಾದರೆ ಎಲ್ಲರನ್ನೂ ಒಳಗೊಳ್ಳುವ ಸಮಾಜ ನಿರ್ಮಾಣವಾಗಬೇಕಿದೆ ಎಂದು ಹೇಳಿದ್ದಾರೆ.

ಹಿಂದುತ್ವ ಜೀವನ ಪದ್ಧತಿಯಾಗಿದ್ದರೂ ಮುಸ್ಲಿಮರು ಇದರಲ್ಲಿ ಒಳಗೊಳ್ಳಬೇಕಾಗಿದೆ. ಅವರನ್ನೂ ಸ್ವೀಕರಿಸುವ ವಿಶಾಲ ಮನೋಭಾವ ಬೇಕಾಗಿದೆ. ಅದು ಇಲ್ಲದಿದ್ದರೆ ಹಿಂದುತ್ವ ಎನ್ನುವ ವಿಶಾಲ ಪದಕ್ಕೆ ಅರ್ಥವೇ ಇಲ್ಲ ಎಂದು ಭಗವತ್ ಬಣ್ಣಿಸಿದ್ದಾರೆ.

ಸಂಘವು ಸದಾ ರಾಜಕೀಯದಿಂದ ತನ್ನ ಅಂತರವನ್ನು ಕಾಯ್ದು ಕೊಂಡಿದೆ. ಚುನಾವಣಾ ರಾಜಕೀಯದಿಂದ ಅದು ದೂರ ನಿಲ್ಲುತ್ತದೆ. ಯಾವುದೇ ನಿರ್ಧಿಷ್ಟ ರಾಜಕೀಯ ಪಕ್ಷದ ಪದಾಧಿಕಾರಿಗಳಾಗಿ ನಮ್ಮ ಸ್ವಯಂ ಸೇವಕರು ಭಾಗಿಯಾಗುದಿಲ್ಲ. ಸಂಘವು ಆಡಳಿತಾ ರೂಢ ಬಿಜೆಪಿಯ ಸೈದ್ಧಾಂತಿಕ ಗುರು ಆಗಿದೆ ಎಂದು ಹೇಳಿದರು.

Leave a Reply