ಶಬರಿ ಮಲೆಗೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಮ್ ಕೋರ್ಟು ಅನುಮತಿ ನೀಡಿದೆ. ಆರಾಧನೆಯಲ್ಲಿ ಲಿಂಗ ತಾರತಮ್ಯ ಬೇಡವೆಂದು ತೀರ್ಪಿತ್ತ ಉಚ್ಚ ನ್ಯಾಯಲಯ ಆರ್ತವದ ಹೆಸರಲ್ಲಿ ಮಹಿಳೆಯರಿಗೆ ಪ್ರವೇಶವನ್ನು ನಿಷೇಧಿಸಿರುವುದು ಸಂವಿಧಾನ ವಿರುದ್ಧ ಎಂದು ಹೇಳಿದೆ. ವಿಶ್ವಾಸದ ಹೆಸರಲ್ಲಿ ಮಹಿಳೆಯೊಂದಿಗೆ ತಾರತಮ್ಯ ತೋರಬಾರದು. ದೈಹಿಕ ,ಜೈವಿಕವಾದ ಸಂಬಂಧವನ್ನು ತಳಹದಿಯನ್ನಾಗಿಸಿ ದೇವನೊಂದಿಗಿನ ಸಂಬಂಧವನ್ನು ಅಳೆಯಬಾರದು ಎಂದು ಮುಖ್ಯ ನ್ಯಾಯಾಧೀಶರು ಹೇಳಿದರು.

ಈ ತೀರ್ಪು ಎಲ್ಲಾ ದೇವಾಲಯಗಳಿಗೂ ಅನ್ವಯಿಸುತ್ತದೆ ಎಂದು ಐವರು ಸದಸ್ಯರ ಸಂವಿಧಾನ ಬೆಂಚು ಬಹುಮತದಲ್ಲಿ ತೀರ್ಪಿತ್ತಿದೆ. ಬೆಂಚಿನಲ್ಲಿದ್ದ ಏಕೈಕ ಮಹಿಳಾ ಸದಸ್ಯೆ ಈ ತೀರ್ಪಿಗೆ ಸಹಮತ ವ್ಯಕ್ತಪಡಿಸಿಲ್ಲ.
ದೇಶದಲ್ಲಿ ಜಾತ್ಯತೀತ ವಾತಾವರಣವನ್ನು ಕಾಪಾಡಿಕೊಳ್ಳಲು ಆಳವಾದ ಧಾರ್ಮಿಕತೆ ಹೊಂದಿರುವ ಸಮಸ್ಯೆಗಳಿಗೆ ಸಿಕ್ಕಿಹಾಕಬಾರದು ಎಂದು ಅವರು ಹೇಳಿದರು.

“ತಾರ್ಕಿಕತೆಯನ್ನು ಧರ್ಮಕ್ಕೆ ತರಲು ಸಾಧ್ಯವಿಲ್ಲ ಧಾರ್ಮಿಕ ನಂಬಿಕೆ ಮತ್ತು ಸಂವಿಧಾನದ ಸಮಾನತೆಯ ತತ್ವಗಳನ್ನು ಪ್ರತ್ಯೇಕ ವಾಗಿ ನೋಡಬೇಕು. ಧಾರ್ಮಿಕ ಆಚರಣೆ ನಂಬಿಕೆಗಳನ್ನು ಗಳನ್ನು ನ್ಯಾಯಾಲಯ ತೀರ್ಮಾನಿಸಬಾರದು. ಅದನ್ನು ಆ ಸಾಮಾಜಿಕ ಅನಿಷ್ಟವಲ್ಲದ ಆಚರಣೆಗಳನ್ನು ಅವರೇ ಪರಿಹಾರ ಕಂಡುಕೊಳ್ಳಬೇಕು ” ಎಂದು ಅವರು ಅಭಿಪ್ರಾಯ ಪಟ್ಟರು.

Leave a Reply