ನವದೆಹಲಿ : ಕಾಶ್ಮೀರಿ ಮುಸ್ಲಿಮ್ ಮಹಿಳೆ ಇರಮ್ ಹಬೀಬ್ ಮೊದಲ ಕಾಶ್ಮೀರಿ ಮುಸ್ಲಿಂ ಮಹಿಳಾ ಪೈಲಟ್ ಆಗುವ ಮೂಲಕ ಎಲ್ಲರ ಗಮನ ಸೇಳೆದಿದ್ದಾರೆ. ತಮ್ಮ ಸತತ ಪರಿಶ್ರಮದ ಫಲವಾಗಿ ಪೈಲಟ್ ಹುದ್ದೆ ಅಲಂಕರಿಸಿದ ಅವರು ಸೆಪ್ಟೆಂಬರ್ ನಿಂದ ಖಾಸಗಿ ಏರ್ ಲೈಲ್ಸ್ ಸಂಸ್ಥೆಯಲ್ಲಿ ಪೈಲಟ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ ಹಬೀಬ್ ತಂದೆ ಶಸ್ತ್ರಚಿಕಿತ್ಸೆಯ ಸಾಧನಗಳ ಪೂರೈಕೆದಾರರಾಗಿದ್ದಾರೆ. ಪೈಲಟ್ ಆಗುವ ತನ್ನ ಬಾಲ್ಯದ ಮಹತ್ವಾಕಾಂಕ್ಷೆ ಈಡೇರಿಸಲು ಆಕೆ ಅರಣ್ಯ ಶಾಸ್ತ್ರ (forestry) ವಿಷಯದಲ್ಲಿ ಡಾಕ್ಟರೇಟ್ ಪಡೆಯುವ ವಿಚಾರವನ್ನು ಕೈಬಿಟ್ಟು ಈ ಸಾಧನೆ ಮಾಡಲು ಹೊರಟಿದ್ದರು. ಕಮರ್ಷಿಯಲ್ ಪೈಲಟ್ ಪರವಾನಗಿ ಪಡೆಯುವುದಕ್ಕಾಗಿ ದೆಹಲಿಯಲ್ಲಿ ತರಬೇತಿಯನ್ನು ಪಡೆಯುತ್ತಿರುವ ಹಬೀಬ್, 2016 ರಲ್ಲಿ ಅಮೆರಿಕದಲ್ಲಿಪ್ರಾಥಮಿಕ ತರಬೇತಿಯನ್ನು ಪೂರ್ಣಗೊಳಿಸಿದ್ದೇನೆಂದು ತಿಳಿಸಿದರು.

“ಕಾಶ್ಮೀರಿ ಮುಸ್ಲಿಂ ಮಹಿಳೆ ವಿಮಾನ ಹಾರಾಟ ನಡೆಸುತ್ತಿರುವುದನ್ನು ಎಲ್ಲರೂ ಆಶ್ಚರ್ಯದಿಂದ ನೋಡುತ್ತಿದ್ದಾರೆ. ಆದರೆ ನಾನು ಪೈಲಟ್ ಆಗುವ ನನ್ನ ಕನಸನ್ನು ಈಡೇರಿಸಲು ಮುಂದೆ ಸಾಗಿದೆ ಎಂದು ಇರಮ್ ಆತ್ಮವಿಶ್ವಾಸದೊಂದಿಗೆ ಹೇಳುತ್ತಾರೆ.

ಟ್ರಿಬ್ಯೂನ್ನಲ್ಲಿನ ವರದಿಯ ಪ್ರಕಾರ ಈ ವಿಷಯವನ್ನು ತನ್ನ ಪೋಷಕರಿಗೆ ಮನವರಿಕೆ ಮಾಡಿಸಲು ಆಕೆಗೆ ಆರು ವರ್ಷಗಳು ಹಿಡಿದಿದೆ. ಸಂಪ್ರದಾಯವಾದಿ ಮುಸ್ಲಿಂ ಕುಟುಂಬದಿಂದ ಬಂದಿರುವ ಆಕೆಗೆ ಕುಟುಂಬದ ಸದಸ್ಯರನ್ನು ಮನವೊಲಿಸಲು ತುಂಬಾ ಪಾಡು ಪಡಬೇಕಾಯಿತು.

Leave a Reply