ನವದೆಹಲಿ: ಪಂಜಾಬ್ ನ್ಯಶನಲ್ ಬ್ಯಾಂಕ್ ಗೆ 13 ಸಾವಿರ ಕೋಟಿ ಸಾಲ ಪಡೆದು ವಂಚಿಸಿದ ವಜ್ರ ಉದ್ಯಮಿ ನೀರವ್ ಮೋದಿಗೆ ಸೇರಿದ ಬೃಹತ್ ಸೊತ್ತುಗಳು ಪತ್ತೆಯಾಗಿವೆ.

ನ್ಯೂಯಾರ್ಕ್‍ನ ಅತ್ಯಾಧುನಿಕ ಅಪಾರ್ಟ್‍ಮೆಂಟ್ ಸಹಿತ 637 ಕೋಟಿಯ ಸೊತ್ತುಗಳನ್ನು ಎನ್ಫೋರ್ಸ್ಮೆಂಟ್ ಡೈರೆಕ್ಟರೇಟ್ ಪತ್ತೆ ಮಾಡಿದೆ. 22.69 ಕೋಟಿ ಮೌಲ್ಯದ ಆಭರಣಗಳು ಅವುಗಳ ಷೇರು ಮೌಲ್ಯ ಸುಮಾರು ₹ 85 ಕೋಟಿಗಳಷ್ಟಿದೆ ಎಂದು ಅಂದಾಜಿಸಲಾಗಿದೆ. ಮೋದಿ ಮತ್ತು ಇತರರಿಗೆ ಜನವರಿನಲ್ಲಿ ಸಿಬಿಐ ಪ್ರಕರಣ ದಾಖಲಿಸಿದ ಬಳಿಕ ಈ ಆಭರಣವನ್ನು ರವಾನೆ ಮಾಡಲಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಆಭರಣವನ್ನು ಮೋದಿ ಪರವಾಗಿ ಹಾಂಗ್ ಕಾಂಗ್ನಲ್ಲಿನ ಖಾಸಗಿ ಕಂಪೆನಿಯ ಆವರಣದಲ್ಲಿ ಇರಿಸಲಾಗಿತ್ತು.

ಭಾರತ ಇಂಗ್ಲೇಂಡ್ ನ್ಯೂಯಾರ್ಕ್ ಮುಂತಾದೆಡೆ ಅನೇಕ ಸೊತ್ತುಗಳು ಆಭರಣಗಳು ಫ್ಲಾಟುಗಳು ಮುಂತಾದವುಗಳ ಸೇರಿ ಸುಮಾರು 637 ಕೋಟಿಯ ಸೊತ್ತುಗಳನ್ನು ಪತ್ತೆ ಮಾಡಲಾಗಿದೆ.

Leave a Reply