ರಾಮ ಮತ್ತು ರಹೀಮ್ ಎಂಬ ಕೃಷಿಕರು ಗಂಗಾ ನಗರದ ಗೌರವಾನ್ವಿತರು. ಇಬ್ಬರು ಹತ್ತಿರದ ಹೊಲ ಮನೆಯನ್ನು ಹೊಂದಿರುವುದರೊಂದಿಗೆ ಪರಸ್ಪರ ಪ್ರ್ರಾಮಾಣಿಕತೆಗೆ ಪಾತ್ರರಾಗಿದ್ದರು. ಇವರ ಕುಟುಂಬ ಬಹಳ ಅನ್ಯೋನ್ಯವಾಗಿತ್ತು. ಪ್ರತಿಯೊಂದು ವಿಷಯದಲ್ಲಿ ಇಬ್ಬರು ಚರ್ಚಿಸಿದ ನಂತರವೇ ಒಂದು ನಿರ್ಣಯಕ್ಕೆ ಬರುತ್ತಿದ್ದರು. ಒಡಹುಟ್ಟಿದ ಸಹೋದರ ರಿಗಿಂತಲೂ ಇವರ ಸಂಬಂಧ ಮಧುರ ವಾಗಿತ್ತು. ಇಬ್ಬರ ನಡೆ-ನುಡಿಗಳೇ ತನ್ನ ನಗರದ ಸುತ್ತಲಿನ ಹತ್ತು ಹಳ್ಳಿಗೆ ಹೆಸರಾಗಿತ್ತು.

ರಹೀಮ್‍ನು ತನ್ನಲ್ಲಿನ ನಾಲ್ಕು ಎಕರೆ ಜಮೀನನ್ನು ಸಾಗುವಳಿ ಮಾಡುತ್ತ ಸಣ್ಣ ದೊಂದು ಅಂಗಡಿಯ ವ್ಯಾಪಾರದೊಂದಿಗೆ ಕುಟುಂಬ ಸಲಹುತ್ತಿದ್ದ. ಮೂರು ಜನ ಗಂಡು ಮೂರು ಜನ ಹೆಣ್ಣು ಮಕ್ಕಳೊಂದಿಗೆ ಕುಟುಂಬ ಸಂತೋಷ ದಿಂದ ಇತ್ತು. ದಿನಗಳೆನಿಸಿದಂತೆ ಮಳೆಯ ಪ್ರಮಾಣ ಕಡಿಮೆಯಾಗಿ ಹೊಲದಿಂದ ಬರುವ ಆದಾಯ ಕಡಿಮೆ ಆಗಿ ಕುಟುಂಬದ ಖರ್ಚು ಹೆಚ್ಚಾಯಿತು. ಮಕ್ಕಳ ಮದುವೆಗಾಗಿ ರಾಮನ ಹತ್ತಿರ ಸಾಲ ಮಾಡಿದ. ಸಾಲ ತೀರಿಸಲಾಗದೆ ರಹೀಮ್ ತನ್ನ 5 ಎಕರೆ ಹೊಲವನ್ನು ರಾಮನಿಗೆ ಮಾರಿದ. ಜೀವದ ಗೆಳೆಯ ಹೊಲವನ್ನು ಒತ್ತಾಯದಿಂದ ಖರೀದಿಸಿದ. ಐದು ವರ್ಷದೊಳಗಾಗಿ ನನ್ನ ದುಡ್ಡನ್ನು ನನಗೆ ಮರಳಿಸಿದಲ್ಲಿ ರಹೀಮನ ಹೊಲವನ್ನು ಮರಳಿ ಕೊಡುವುದಾಗಿಯೂ ಹೇಳಿದ.

ರಹೀಮ್ 5 ಎಕರೆ ಹೊಲ ಖರ್ಕಿ ಹುಲ್ಲು ಬೆಳೆದಿತ್ತು. ಎಂಟು ಎತ್ತಿನ ಕಬ್ಬಿಣದ ಮಡಿಕೆ ಒಡೆಯಲು ಕೇಳಿ ಕೊಂಡು ಮಡಿಕೆಯನ್ನು ಒಡೆದ. ಮಡಿಕೆ ಒಡೆಯುವಾಗ ಹೊಲದ ಮಧ್ಯದಲ್ಲಿರುವ ದೊಡ್ಡ ಆಲದ ಮರದ ಕೆಳಗೆ ಬಂಗಾರದ ನಾಣ್ಯದ ಐದು ಗಡಿಗೆಗಳು ಸಿಕ್ಕವು. ಗಡಿಗೆಗಳನ್ನು ಮನೆಗೆ ತಂದು ರಹೀಮ್‍ನಿಗೆ ಕರೆದು ಹೇಳಿದ, ನಿನ್ನ ಹೊಲದಲ್ಲಿ ಮಡಿಕೆ ಒಡೆಯುವಾಗ ಐದು ಬಂಗಾರದ ನಾಣ್ಯಗಳ ಗಡಿಗೆಗಳು ಸಿಕ್ಕಿವೆ ಅವನ್ನು ನೀನು ತೆಗೆದು ಕೊಂಡು ಹೋಗು….. ಗಡಿಗೆಗಳನ್ನು ತೋರಿಸಿದ.

ಆಗ ರಹೀಮ್ ಹೇಳಿದ: ನಾನು ಹೊಲವನ್ನು ನಿನಗೆ ಮಾರಿದ್ದೇನೆ. ಹೊಲ ಮಾರಿದ ಮೇಲೆ ಹೊಲದ ಎಲ್ಲಾ ಸಂಪತ್ತು ನಿನಗೆ ಸೇರಿದ್ದು. ಆ ಬಂಗಾರದ ನಾಣ್ಯಗಳು ನನ್ನದೆಂದು ಹೇಳಲು ಆತ್ಮ ಬಿಡುತ್ತಿಲ್ಲ. ಅಲ್ಲಾಹನು ಮೆಚ್ಚಲಾರ. ಆ ನಾಣ್ಯಗಳು ನನಗೆ ಬೇಕಾಗಿಲ್ಲ. ಅದೆಲ್ಲಾ ನಿನಗೆ ಸಿಕ್ಕಿದ್ದು. ನೀನೇ ಅವೆಲ್ಲವನ್ನೂ ಬಳಸಿ ಕೋ ಎಂದು ಹೇಳಿ ಹೊರಡಲು ಸಿದ್ಧನಾದ.

ರಹೀಮ್… ನಾನು ನಿನ್ನ ಹೊಲವನ್ನು ಮಾತ್ರ ಖರೀದಿಸಿದ್ದೇನೆ. ಬಂಗಾರದ ನಾಣ್ಯ ಗಳನ್ನಲ್ಲ. ನಿನಗೂ ಬಹಳಷ್ಟು ತೊಂದರೆ ಇದೆ. ನಿನ್ನ ತೊಂದರೆಗೆ ದೇವನು ಸಹಾಯ ಮಾಡಿದ್ದಾನೆ. ಈ ನಾಣ್ಯಗಳನ್ನು ಮಾರಿ ನನ್ನ ಹಣ ನನಗೆ ಕೊಟ್ಟು ಬಿಡು. ನಿನ್ನ ಹೊಲವನ್ನು ತೆಗೆದು ಕೋ. ಸಾಗು ವಳಿಯನ್ನು ಮಾಡಿಕೊಂಡು ನಿನ್ನ ಕುಟುಂಬ ದೊಂದಿಗೆ ನೆಮ್ಮದಿಯಾಗಿ ಇರಬೇಕೆನ್ನು ವುದೇ ನನ್ನ ಮಹದಾಸೆ.

ರಾಮ್… ಹೊಲವನ್ನು ಎಂದು ತನಗೆ ಮಾರಿದ್ದೇನೋ ಅಂದೆ ನನ್ನ ಹಕ್ಕು ಮುಗಿದಿದೆ. ಆ ನಾಣ್ಯಗಳು ನಿನಗೆ ಸಂಬಂಧಿಸಿದವು. ನಾ ಪಡೆಯಲಾರೆ ಎಂದು ಹೇಳಿ ಮನೆಗೆ ಹೋದ. ರಹೀಮ್ ಪತ್ನಿ ಪಾತಿಮಾಬಿಯು ಗಂಡನ ವಿಚಾರಕ್ಕೆ ಬೆಂಬಲ ನೀಡಿದಳು. ರಾಮನು ತನ್ನ ಕುಟುಂಬದ ಸದಸ್ಯರಿಗೆ ಕೇಳಿದಾಗ ಆ ನಾಣ್ಯ ಪಡೆಯಲು ಒಪ್ಪಲಿಲ್ಲ. ಈ ವಿಷಯ ನಿಜಾಮ ಮೀರ್ ಉಸ್ಮಾನ್ ಅಲಿ ಖಾನ್‍ನ ದರ್ಬಾರಿಗೂ ತಲುಪಿತು.

ಗಡಿ ಬಂಗಾರದ ನಾಣ್ಯಗಳ ಗಡಿಗೆ ಗಳೊಂದಿಗೆ ರಾಮ್, ರಹೀಮ್ ಇಬ್ಬರನ್ನು ನಿಜಾಮ್ ದರ್ಬಾರಿಗೆ ಕರೆದು ವಿಚಾರಿಸಿದ. ಬಂಗಾರದ ನಾಣ್ಯಗಳನ್ನು ಸಮನಾಗಿ ಹಂಚಿಕೊಳ್ಳಿ ಎಂದು ಹೇಳಿದ. ರಾಜನ ಮಾತಿಗೆ ಇಬ್ಬರು ಒಪ್ಪದೇ ದೀರ್ಘ ಚರ್ಚೆಯೊಂದಿಗೆ ಆ ಬಂಗಾರದ ನಾಣ್ಯ ಗಳನ್ನು ಅರಮನೆಯಲ್ಲಿಯೇ ಬಿಟ್ಟು ಹೋದರು. ರಾಜನಿಗೆ ಚಿಂತೆ ಪ್ರಾರಂಭ ವಾಯಿತು. ದರ್ಬಾರಿನ ಮಂತ್ರಿಗಳನ್ನು ಕರೆದು ಚರ್ಚಿಸಿ ಒಂದು ನಿರ್ಣಯಕ್ಕೆ ಬಂದ. ಬಂಗಾರದ ನಾಣ್ಯಗಳನ್ನು ಸ್ವಂತ ಕ್ಕಾಗಿ ಬಳಸದೆ ಸಾರ್ವಜನಿಕರ ಸದುಪ ಯೋಗಕ್ಕಾಗಿ ಬಳಸಲು ಸಿದ್ದನಾದ. ಅಕ್ಕ ಸಾಲಿಗನನ್ನು ಕರೆಸಿ ನಾಣ್ಯಗಳನ್ನು ಮಾರಲು ತಿಳಿಸಿದ. ಅದರಿಂದ ಬಂದ ಹಣದಿಂದ ವಿಶ್ರಾಂತಿ ಭವನ ಒಂದನ್ನು ಕಟ್ಟಿಸಿದ, ಅದಕ್ಕೆ ರಾಮ, ರಹೀಮ್ ವಿಶ್ರಾಂತಿ ಭವನ ಎಂದು ಹೆಸರಿಟ್ಟ. ರಾಮ, ರಹೀಮ್ ಇಬ್ಬರನ್ನು ಕರೆಸಿ ಅವರಿಂದ ಸಾರ್ವಜನಿಕರ ಸಮ್ಮುಖದಲ್ಲಿ ವಿಶ್ರಾಂತಿ ಭವನವನ್ನು ಲೋಕಾರ್ಪಣೆ ಮಾಡಿದರು. ಅರಮನೆಯ ಸುತ್ತಲಿನ ಗ್ರಾಮದ ಜನರು ಮಂತ್ರಿಗಳು, ಸೇವಕರು, ಸೈನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಮ್, ರಹೀಮ್ ಮತ್ತು ರಾಜನ ಆದರ್ಶತೆಯನ್ನು ಕೊಂಡಾಡಿದರು. ವಿಶ್ರಾಂತಿ ಭವನವನ್ನು ನೋಡಿ ಜನರ ಹೊಗಳಿಕೆಯ ಮಾತುಗಳಿಂದ ಇವರ ಕಣ್ಣುಗಳಲ್ಲಿ ಆನಂದ ಭಾಷ್ಪಗಳೊಂದಿಗೆ ಇಬ್ಬರು ಬಿಗಿದಪ್ಪಿ ಕೊಂಡರು.

ರಾಮ್… ರಹೀಮ್ ಅಮರ್ ರಹೇ… ಎಂಬ ಜನರ ಕೂಗು ಮುಗಿಲು ಮುಟ್ಟಿತು.

ಸಾಂದರ್ಭಿಕ ಚಿತ್ರ

Leave a Reply