ಇದು ನಮ್ಮ ಊರು: ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಸಾಜಿ ವರ್ಗೀಸ್ ಅವರು ಅಭಿವೃದ್ಧಿ ಪಡಿಸಿದ ಈ ಪರಿಸರ ಸ್ನೇಹಿ ಸ್ಟ್ರಾಗಳು ಅದೆಷ್ಟು ಯಶಸ್ವಿಯಾಗಿದೆ ಎಂದರೆ ಸಾಜಿಯವರ್ ಈ ಉತ್ಪನ್ನ ಬ್ರಹತ್ ಉದ್ದಿಮೆಯಾಗಿ ಬೆಳೆದು ಇದೀಗ ಕರಾವಳಿ ಭಾಗದ ಗ್ರಾಮೀಣ ಮಹಿಳೆಯರಿಗೆ ಉದ್ಯೋಗವನ್ನು ಒದಗಿಸುತ್ತಿದೆ. ಈ ನಿಟ್ಟಿನಲ್ಲಿ ಈ ಆವಿಷ್ಕಾರವು ಒಂದು ಮೈಲಿಗಲ್ಲು ಅಂತ ಹೇಳಬಹುದು. 2017 ರಲ್ಲಿ ಸಾಜಿ ತಮ್ಮ ಕಾಲೇಜು ಕ್ಯಾಂಪಸ್‌ಗೆ ಹೋಗುವಾಗ ಒಣಗಿದ ತೆಂಗಿನ ಗರಿಗಳನ್ನು ನೋಡಿದ ನಂತರ ಈ ವಿಚಾರವನ್ನು ಮಂಡಿಸಿದರು. ಅಂದು ಅವರು ನೋಡಿದ ಒಣಗಿದ ತೆಂಗಿನ ಗರಿ ಪಕ್ಕಾ ಸ್ಟ್ರಾ ದಂತೆ ಕಾಣುತ್ತಿದ್ದವು. 2018 ರಲ್ಲಿ ವರ್ಗೀಸ್ ತೆಂಗಿನ ಗರಿಯಿಂದ ಈ ಕಲ್ಪನೆಯನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದರು.

ಸಾಜಿ ಅವರು ತಯಾರಿಸಿದ ಈ ನವೀನ ಈ ಒಣ ತೆಂಗಿಆನ್ ಗರಿಯ ಸ್ಟ್ರಾವನ್ನು ಸಾವಯವ ಆಹಾರ ಅಂಟುಗಳಿಂದ ಅಂಟಿಸಿ ತಯಾರಿಸಲಾಗುತ್ತದೆ. ಇದು 12 ತಿಂಗಳಿಗಿಂತ ಹೆಚ್ಚು ಕಾಲ ಇರುತ್ತದೆ ಮತ್ತು 6 ಗಂಟೆಗಳ ಕಾಲ ನೀರಿನಲ್ಲಿ ಹಾಳಾಗುವುದಿಲ್ಲ ಎನ್ನಲಾಗಿದೆ. ಇದೀಗ ಮಧುರೈ, ಟುಟಿಕೊರಿನ್ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಮೂರು ಘಟಕಗಳನ್ನು ಸ್ಥಾಪಿಸಿ ಗ್ರಾಮೀಣ ಮಹಿಳೆಯರನ್ನು ಬಳಸಿ ಈ ಸ್ಟ್ರಾಗಳನ್ನು ತಯಾರಿಸಲಾಗುತ್ತಿದೆ. `ಸನ್‌ಬರ್ಡ್’ ಹೆಸರಿನ ಬ್ರಾಂಡ್ ಆಗಿರುವ ಈ ಸ್ಟ್ರಾಗಳು ಇದೀಗ ದೇಶ ವಿದೇಶದಲ್ಲಿ ಪ್ರಸಿದ್ಧವಾಗಿದೆ. ಯುಎಸ್, ಆಸ್ಟ್ರೇಲಿಯಾ ಮತ್ತು ಯುರೋಪಿಯನ್ ಯೂನಿಯನ್ ದೇಶಗಳು ಸೇರಿದಂತೆ 25 ದೇಶಗಳಿಗೆ ಸ್ಟ್ರಾಗಳನ್ನು ಈಗ ರಫ್ತು ಮಾಡಲಾಗುತ್ತಿದೆ. ಪ್ರತಿ ಒಣಹುಲ್ಲಿನ ಬೆಲೆ 5 ರೂಪಾಯಿ.

Leave a Reply