ಅಗರ್ತ; ತ್ರಿಪುರ ಮುಖ್ಯಮಂತ್ರಿ ಬಿಪ್ಲವ್ ಕುಮಾರ್ ಹತ್ಯೆಗೆ ಮ್ಯಾನ್ಮಾರಿನ ಮಾದಕವಸ್ತು ಮಾಫಿಯ ಸಂಚು ಹೆಣೆದಿದೆಎ ಎಂದು ಬಿಜೆಪಿ ಶಾಸಕ ಹೇಳಿದ್ದಾರೆ.ಏಶ್ಯದ ಅತಿದೊಡ್ಡ ಮಾದಕವಸ್ತು ಮಾಫಿಯ ಮ್ಯಾನ್ಮಾರ್‍ನ ರಾಜಧಾನಿ ನಾಯ್‍ಪಿಡಾವ್‍ನಲಿ ಸಭೆ ಸೇರಿ ಬಿಪ್ಲವ್ ದೇವ್‍ರನ್ನು ಕೊಲ್ಲಲು ಸಂಚು ಹೆಣೆದಿದೆ ಎಂದು ಶಾಸಕ ರತನ್ ಚಕ್ರಬರ್ತಿ ಹೇಳಿದರು.

ತ್ರಿಪುರದಲ್ಲಿ ಬಿಪ್ಲವ್ ದೇವ್ ಅಧಿಕಾರಕ್ಕೆ ಬಂದ ಬಳಿಕ ಮಾದಕವಸ್ತು ವಿರುದ್ಧ ತೀವ್ರ ಕ್ರಮ ಜರಗಿಸಿದ್ದಾರೆ. ಇವರು ಮುಖ್ಯಮಂತ್ರಿಯಾದ ನಂತರ ರಾಜ್ಯದಲ್ಲಿ41,000 ಕಿಲೊಗಾಂಜಾ, 80ಸಾವಿರ ಬಾಟ್ಲಿ ಮಾದಕ ವಸ್ತು ಮಿಶ್ರಿತ ಕಫ್‍ಸಿರಪ್, 135ಲಕ್ಷ ಮಾದಕ ವಸ್ತು ಮಾತ್ರೆಗಳು, ಎರಡು ಕಿಲೊ ಹೆರಾಯಿನ್, 620 ಗ್ರಾಂಬ್ರೌನ್ ಶುಗರ್ ವಶಪಡಿಸಿಕೊಳ್ಳಲಾಗಿದೆ. 250ಮಂದಿಯನ್ನುಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮಾದಕ ವಸ್ತು ಸಾಗಾಟದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವ ಬಿಪ್ಲವ್ ದೇವ್‍ರಿಗೆ ಮಾದಕವಸು ಮಾಫಿಯ ಮರಣದಂಡನೆ ಶಿಕ್ಷೆ ಘೋಷಿಸಿದೆ. ಕೇಂದ್ರ ಗೃಹಸಚಿವಾಲಯಕ್ಕೆ ಈವಿಷಯವನ್ನು ತಿಳಿಸಲಾಗಿದೆ ಎಂದು ಚಕ್ರವರ್ತಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ರಾಜ್ಯದಲ್ಲಿ ಸಿಪಿಎಂ ಮಾದಕವಸ್ತುಮಾಫಿಯಾಗಳಿಗೆ ಬಹಳಷ್ಟು ಸಹಾಯ ಮಾಡುತ್ತಿದೆಎಂದು ರತನ್ ಚಕ್ರವರ್ತಿ ಆರೋಪಿಸಿದರು.

Leave a Reply