ಮಾನವ ಅಲೆಮಾರಿ ಸ್ಥಿತಿಯಿಂದ ಸ್ಥಿರವಾಗಿ ನಿಲ್ಲುವ ವರೆಗೂ ನಡೆ ಯುತ್ತಲೇ ಇದ್ದಾನೆ. ಅಂಬೆಗಾಲಿನಿಂದ ಆರಂಭವಾಗುವ ಮುನ್ನಡೆಯು ಮುಪ್ಪಿನ ಕೋಲುನಡಿಗೆಯ ವರೆಗೂ ಮುಂದು ವರಿಯುತ್ತದೆ.

ಮೊದ ಮೊದಲು ಪಾದರಕ್ಷೆಗಳನ್ನು ಬಳಸಲು ಗೊತ್ತಿರದ ಕಾಲ ಇತ್ತು. ಆದರೆ ಈಗ ಆಧುನಿಕತೆಯ ಪ್ರಭಾವ ದಿಂದಾಗಿ ಚಿಕ್ಕ ಮಕ್ಕಳಿಂದ ಹಿಡಿದು ಮುಪ್ಪಾನು ಮುತ್ತು ಕಾಲುಗಳು ಚಪ್ಪಲಿಯಿಲ್ಲದೆ ಕಾಲು ಎತ್ತಲಾರವು. ಇನ್ನೂ ಹೇಳಬೇಕೆಂದರೆ ನಗರಗಳ ಅಡುಗೆ ಮನೆಯಲ್ಲೂ ಚಪ್ಪಲಿಗಳ ಸದ್ದು, ಮಹಿಳೆಯರು ವಿವಿಧ ವಿನ್ಯಾಸದ ಹಾಗೂ ಉಡುಪುಗಳಿಗೆ ಮ್ಯಾಚ್ ಆಗುವ ಪಾದರಕ್ಷೆ ಹಾಕುವುದು ಸಾಮಾನ್ಯ.
ಈ ವ್ಯಾಪಕ ಬಳಕೆ ಹೆಚ್ಚುತ್ತಿರುವ ಕಾಲ ಘಟ್ಟದಲ್ಲಿ ಜಗತ್ತು ಮತ್ತೆ ಬರಿ ಗಾಲ ನಡಿಗೆಗೆ ಮರಳುತ್ತಿದೆ. ಅನೇಕ ಸಂಶೋಧನೆಗಳು ಬರಿಗಾಲ ನಡಿಗೆಯ ಮಹತ್ವ ಮತ್ತು ಉತ್ತಮ ಆರೋಗ್ಯಕ್ಕೆ ಅದರ ಅಗತ್ಯವನ್ನು ಸಾರಿ ಹೇಳುತ್ತಿವೆ.

ಖರ್ಚಿಲ್ಲದ ಚಿಕಿತ್ಸೆ:

*ಬರಿಗಾಲಿನಲ್ಲಿ ನಡೆಯುವುದರಿಂದ ದೇಹದ ಸಮತೋಲನ ಹೆಚ್ಚುತ್ತದೆ.

* ಪಾದಗಳು ಗಟ್ಟಿಗೊಳ್ಳುತ್ತವೆ. ಮಾಂಸ ಖಂಡಗಳು ಬಲಿಷ್ಟವಾಗುತ್ತವೆ.

* ಬರಿಗಾಲಿನಲ್ಲಿ ನಡೆಯುವುದರಿಂದ ಕೀಲುನೋವು ದೂರವಾಗುತ್ತದೆ.

*ಬೆನ್ನು ನೋವಿಗೆ ಇದು ರಾಮಬಾಣ.

*ರಕ್ತ ಸಂಚಾರ ಸುಗಮವಾಗಿ ಹೃದಯದ ತೊಂದರೆಯೂ ಬರುವುದಿಲ್ಲ.

*ಬರಿಗಾಲಿನಲ್ಲಿ ನಡೆಯುವು ದರಿಂದ ನಮ್ಮ ಆಯುಸ್ಸು ಹೆಚ್ಚುತ್ತದೆ.

*ದೇಹದ ಎಲ್ಲಾ ಅವಯವ ಗಳಿಗೂ ಶಕ್ತಿ ಹಂಚಿಕೆಯಾಗಿ ಬಲಿಷ್ಟವಾಗುತ್ತವೆ.

*ಬಹೂಪಯೋಗಿ ಬರಿಗಾಲ ನಡಿ ಗೆಗೆ ಸ್ವಚ್ಛವಾದ ರಸ್ತೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಹುಲ್ಲಿನ ಮೈದಾನದಲ್ಲಿ ನಡೆಯುವುದು ಉತ್ತಮ.

Leave a Reply