Representational Image

ಅಡ್ವಾಣಿಯವರ ಕಣ್ಣಲ್ಲಿ ನೀರಿತ್ತು ಆದರೆ, ಅವರು ತಡೆಯಲಿಲ್ಲ ಎಂದು ಬಿಜೆಪಿ ತ್ಯಜಿಸುವ ಬಗ್ಗೆ ಶತ್ರುಘ್ನ ಸಿನ್ಹಾ ಹೇಳಿದ್ದಾರೆ.ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವ ಬಗ್ಗೆ ಮಾತನಾಡುತ್ತಾ ಶತ್ರುಘ್ನ ಸಿನ್ಹಾ, ಅವರು ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಯವರಲ್ಲಿ ಈ ನಿರ್ಧಾರದ ಬಗ್ಗೆ ತಿಳಿಸಿದಾಗ ಅವರ ಕಣ್ಣುಗಳಲ್ಲಿ ನೀರಿತ್ತು ಆದರೆ ಅವರು ನನ್ನನ್ನು ತಡೆಯಲಿಲ್ಲ ಎಂಬುದಾಗಿ ತಿಳಿಸಿದ್ದಾರೆ.ತಾನು ಸರಿಯಾದ ಹಾಗೂ ಉತ್ತಮ ದಿಕ್ಕಿನಲ್ಲಿ ಸಾಗುತ್ತಿದ್ದೇನೆ ಮತ್ತು ತನಗೆ ಅಡ್ವಾಣಿಯವರ ಆಶರ್ವಾದವೂ ಸಿಕ್ಕಿದೆ ಎಂದವರು ಹೇಳಿದರು.

ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನದಂದು ಬಾಲಿವುಟ್ ನಟ ಶತ್ರುಘ್ನಾ ಸಿನ್ಹಾ ಪಕ್ಷ ತೊರೆದು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ದೆಹಲಿ ಕಾಂಗ್ರೆಸ್ ಕಚೇರಿಯಲ್ಲಿ ಪ್ರಾಥಮಿಕ ಸದಸ್ಯತ್ವ ಪಡೆಯುವ ಮೂಲಕ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಹಾಗೂ ರಣದೀಪ್ ಸುರ್ಜೆವಾಲ ಅವರ ಸಮ್ಮುಖದಲ್ಲಿ ಸೇರ್ಪಡೆಯಾಗಿದ್ದರು.

Leave a Reply