Representational Image

ಆತಂಕ, ಉದ್ವೇಗ, ಭಯ, ಒತ್ತಡ ಗಳಿಂದ ಮುಕ್ತರಾಗಲು ಈ ಕೆಳಕಂಡಂತೆ ವರ್ತಿಸಿದ್ದಲ್ಲಿ ತುಂಬಾ ಫಲಕಾರಿಯಾಗುವುದು…..

1. ಮುಂಗೋಪಿಗಳಾಗದೇ ಸದಾ ಸ್ನೇಹ ಮಯಿಗಳಾಗಿರುವುದು.
2, ಸಮಯ ಪ್ರಜ್ಞೆ ಕರ್ತವ್ಯ ಪ್ರಜ್ಞೆ ಯೊಂದಿಗೆ ಶಿಸ್ತು ಸಂಯಮಶೀಲ ಶ್ರದ್ಧೆಯ ಬದುಕಿಗೆ ಸದಾ ಒತ್ತು ನೀಡುವುದು.
3, ಸದಾ ಹಸನ್ಮುಖಿಗಳಾಗಿ, ಒಂಟಿತನ ತೊರೆದು ಹೃದಯ ಸ್ಪಂದನದ ಹೃದಯಸ್ಪರ್ಶಿ ಸೇವೆ ನೀಡುವುದು.
4. ಒತ್ತಡ, ಉದ್ವೇಗ, ಆತಂಕಗಳನ್ನು ತೊರೆದು ಸದಾ ಮಾನಸಿಕವಾಗಿ ಪ್ರಬುದ್ಧ ರಾಗಿರಬೇಕು.
5. ಬೇಗ ಮಲಗುವ, ಬೇಗ ಏಳುವ ಪರಿಪಾಠ ಪ್ರಶಂಸಾರ್ಹ

6.ಅವಸರ, ಆತಂಕಗಳು ಸಮೀಪ ಸುಳಿಯದಂತೆ ಕಾರ್ಯ ಪ್ರವೃತ್ತರಾಗಿರುವುದು.
7. ಸೋಮಾರಿತನ, ಆಲಸ್ಯ, ಅಸಡ್ಡೆಗಳು ದಿನಚರಿಯಲ್ಲಿ ಪ್ರವೇಶಿಸದಂತೆ ಜಾಗರೂಕರಾಗಿರುವುದು.
8. ಕಛೇರಿಯಲ್ಲಾಗಲಿ, ಮನೆಯಲ್ಲಾಗಲಿ ನಡೆವ, ನುಡಿವ ರೀತಿ ರಿವಾಜುಗಳಲ್ಲಿ ಅಚ್ಚುಕಟ್ಟಾಗಿರುವುದು.
9. ಹಾಸಿಗೆ ಇದ್ದಷ್ಟು ಕಾಲು ಚಾಚುವ ಪ್ರವೃತ್ತಿ ನಿಮ್ಮದಾಗಿಸಿಕೊಳ್ಳಿ
10. “ಅತಿಯಾಸೆ ಗತಿ ಕೇಡು” ಅತಿ ಆಸೆ ಮನಸ್ಸಲ್ಲಿ ಸುಳಿಯಕೂಡದು. ವೃತ್ತಿ ತೃಪ್ತಿ ಇರಲಿ.

11. ರಜಾದಿನಗಳಲ್ಲಿ ಮಡದಿ ಮಕ್ಕಳ ಜೊತೆಗೆ ರಮಣೀಯ, ರಂಜನೀಯ, ಪುಣ್ಯಕ್ಷೇತ್ರ ಸ್ಥಳಕ್ಕೆ ಭೇಟಿ ನೀಡುವುದು.
12. ಮದ್ಯಪಾನ, ಔಷಧಿಗಳ ದಾಸರಾಗದಿರುವುದು.
13, ದಿನಚರಿಯಲ್ಲಿ ಸಾಹಿತ್ಯ, ಸಂಗೀತ, ಪ್ರಾರ್ಥನೆ, ವ್ಯಾಯಾಮಗಳಿಗೆ ಸಮಯ ಕಲ್ಪಿಸುವುದು.
14. ಕಾಡು ಹರಟೆ ಸಲ್ಲದು. ಪ್ರತಿ ನಿಮಿಷವೂ ಅತ್ಯಮೂಲ್ಯವಾದುದು (ಮುತ್ತು ಕಳೆದರೆ ಸಿಕ್ಕಿತು, ಹೊತ್ತು ಕಳೆದರೆ ಸಿಕ್ಕೀತೇ?)
15. ಪ್ರತಿದಿನ ಮಲಗುವಾಗ ದೇವ ಧ್ಯಾನ ಮಾಡಿ, ಸಕಾರಾತ್ಮಕವಾಗಿ ಚಿಂತಿಸಿ ನಿದ್ರೆ ಹೋಗುವುದು.

16. ಪ್ರತಿದಿನ ಆಹಾರದಲ್ಲಿ ಸತ್ವಯುತ ವಿಟಮಿನ್‌ಯುಕ್ತ ಆಹಾರದ ಬಳಕೆಯ ‘ಮಾನಸಿಕ ಏಕಾಗ್ರತೆಗೆ ಒತ್ತು ನೀಡುವುದು.
17. ಆಹಾರಕ್ಕೆ ಕೊಡುವ ಪ್ರಾಮುಖ್ಯತೆಯ ಜೊತೆಯಲ್ಲಿ ಉಡುಗೆ ತೊಡುಗೆಗಳಿಗೂ, ಸ್ವಚ್ಛತೆ, ಶುಭ್ರತೆಗಳಿಗೂ ಮೀಸಲಿರಿಸಿ.
18, ದೈಹಿಕ ಹಾಗೂ ಮಾನಸಿಕ ಅರ್ಥಪೂರ್ಣ ಸಹಕಾರಕ್ಕಾಗಿ ದಿನಚರಿಯಲ್ಲಿ ಆಟೋಟಗಳಿಗೂ ಸೂಕ, ಒಲವಿರಲಿ.
19, ಸಭೆ ಸಮಾರಂಭಗಳಿಗೆ ತಪ್ಪದೇ ಹಾಜರಾಗುವುದು.
20. ಪ್ರತಿದಿನ ದೇಹಕ್ಕೆ ಸಾಕಾಗುವಷ್ಟು ನೀರು ಕುಡಿಯುವುದು. ಸಮಯಕ್ಕೆ ಸರಿಯಾಗಿ ಮಲಮೂತ್ರ ವಿಸರ್ಜಿಸುವುದು.

Leave a Reply